ಮುಂಬೈ, ಆ 02 (DaijiworldNews/AK): ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರು ಸದಾ ಒಂದಲ್ಲಾ ಒಂದು ವಿವಾದದಲ್ಲಿ ಸುದ್ದಿಯಾಗುತ್ತಿದ್ದಾರೆ. ಇದೀಗ ಬಿಗ್ಬಾಸ್ ಮನೆಯಲ್ಲಿ ಮಹೇಶ್ ಭಟ್ ನಡೆದುಕೊಂಡ ರೀತಿ ಹಲವು ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಈ ಕಾರಣಕ್ಕೆ ಒಳಗಿರುವ ಸ್ಪರ್ಧಿಗಳ ಮನೆ ಮಂದಿ ಬಿಗ್ಬಾಸ್ ಮನೆ ಪ್ರವೇಶಿಸುತ್ತಿದ್ದಾರೆ. ಮಹೇಶ್ ಭಟ್ ಮಗಳು ಪೂಜಾ ಭಟ್ ಕೂಡ ಬಿಗ್ ಬಾಸ್ ಮನೆ ಒಳಗೆ ಇದ್ದಾರೆ. ಹೀಗಾಗಿ, ಮಹೇಶ್ ಭಟ್ ಅವರು ದೊಡ್ಮನೆ ಒಳಗೆ ಬಂದಿದ್ದರು. ಅವರು ಮಗಳ ಜೊತೆ ಮಾತುಕತೆ ನಡೆಸುವ ಬದಲು ಸ್ಪರ್ಧಿ ಮನಿಶಾ ರಾಣಿ ಕೈ ಹಿಡಿದು ಕುಳಿತಿದ್ದಾರೆ. ಇದನ್ನು ಅನೇಕರು ಟೀಕೆ ಮಾಡಿದ್ದಾರೆ.
ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ ಆರಂಭ ಆಗಿ ಹಲವು ವಾರ ಕಳೆದಿದೆ. ಬಿಗ್ ಬಾಸ್ ಮನೆಯಲ್ಲಿ ನಡೆದ ಲಿಪ್ ಲಾಕ್ ದೃಶ್ಯದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಮಹೇಶ್ ಭಟ್ ಅವರು ಬಿಗ್ಬಾಸ್ ಮನೆ ಒಳಗೆ ತೆರಳಿ ಮನಿಶಾ ರಾಣಿ ಕೈ ಅನ್ನು ಹಿಡಿದುಕೊಂಡು ಕುಳಿತಿದ್ದಾರೆ. ಬಳಿಕ ಅವರ ಕೈಗೆ ಮುತ್ತಿಟ್ಟಿದ್ದಾರೆ. ಅನೇಕರು ಈ ಬಗ್ಗೆ ತಕರಾರು ತೆಗೆದಿದ್ದಾರೆ.
ಮಹೇಶ್ ಭಟ್ ನಡೆದುಕೊಂಡ ರೀತಿ ಸರಿ ಇಲ್ಲ ಎಂದು ಹಲವರು ಟೀಕೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮತ್ತೊಂದು ಕಡೆ ಮಹೇಶ್ ಅವರು ಮನಿಶಾ ರಾಣಿ ಮಗಳ ಸಮಾನರು. ಆ ರೀತಿಯಲ್ಲೇ ಮಹೇಶ್ ಭಟ್ ಅವರು ನೋಡಿರಬಹುದು ಎಂದು ಅನೇಕರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.