ಮುಂಬಯಿ, ಅ 1(DaijiworldNews/AK): ಬಾಲಿವುಡ್ನಲ್ಲಿ ಸ್ವೀಟ್ ಅಂಡ್ ಕ್ಯೂಟ್ ಆಗಿ ಮಿಂಚುತ್ತಿರುವ ಜೋಡಿ ಅಂದ್ರೆ ರಣವೀರ್ – ದೀಪಿಕಾ ಪಡುಕೋಣೆ. ಇವರಿಬ್ಬರು ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇವರಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಮಾಡಿದ್ರು ವೈರಲ್ ಆಗುತ್ತದೆ.ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಟ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗುವುದರ ಜೊತೆಗೆ ಇದಕ್ಕೆ ಅವರ ಪತಿ ರಣವೀರ್ ಅವರು ಮಾಡಿದ ಕಮೆಂಟ್ ಕೂಡ ಅಭಿಮಾನಿಗಳ ವಲಯದಲ್ಲಿ ಸದ್ದು ಮಾಡಿದೆ.
ನಟಿ ದೀಪಿಕಾ ವೈಟ್ & ಬ್ಲ್ಯಾಕ್ ಬಣ್ಣದ ಬಿಕಿನಿ ಉಡುಪನ್ನು ಹಾಕಿಕೊಂಡು ಫೋಸ್ ಕೊಟ್ಟಿದ್ದಾರೆ. ಇದಕ್ಕೆ ’ಒಂದಾನೊಂದು ಕಾಲದಲ್ಲಿ, ತುಂಬಾ ಹಳೆಯದೇನಲ್ಲ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೋಕ್ಕೆ ಈಗ ಲಕ್ಷಾಂತರ ಲೈಕ್ ಹಾಗೂ ಸಾವಿರಾರು ಕಮೆಂಟ್ ಗಳು ಬಂದಿದೆ.
ಪತ್ನಿ ದೀಪಿಕಾ ಹಾಕಿರುವ ಫೋಟೋವನ್ನು ನೋಡಿ ರಣವೀರ್ ಒಂದು ಎಚ್ಚರಿಕೆ ನೀಡಿದ್ದರೆ ಚೆನ್ನಾಗಿರುತ್ತಿತ್ತು” ಎಂದು ಫೋಟೋ ಹಾಕುವ ಮುನ್ನ ಪತಿಯ ಬಳಿ ಕೇಳಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಅರ್ಥದಲ್ಲಿ ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್ ನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.