ಮುಂಬೈ, ಜು 31 (DaijiworldNews/Ak):ಸೌತ್ ಬ್ಯೂಟಿ ಸಮಂತಾ ಸದ್ಯ ಸಿಂಗಲ್ ಆಗಿ ತಮ್ಮ ಲೈಫ್ನ ತಮ್ಮದೇ ಶೈಲಿಯಲ್ಲಿ ಎಂಜಾಯ್ ಮಾಡ್ತಿದ್ದಾರೆ. ನಟನೆಯಿಂದ ಬ್ರೇಕ್ ಪಡೆದು ಬಾಲಿಯಲ್ಲಿ ಕಾಲ ಕಾಳೆಯುತ್ತಿದ್ದಾರೆ. ಇದೀಗ ಅವರ ಬಗ್ಗೆ ಹೊಸ ವಿಚಾರವೊಂದು ಸದ್ದು ಮಾಡುತ್ತಿದೆ. ನಾಗಚೈತನ್ಯ ಜೊತೆಗಿನ ಡಿವೋರ್ಸ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಹುಟ್ಟಿದೆ.
ಡಿವೋರ್ಸ್ ನಂತರ ಈಗ ಮತ್ತೆ ಪ್ರೀತಿಯಲ್ಲಿ ಸಮಂತಾ ಬಿದ್ದಿದ್ದಾರಾ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆಲ್ಲಾ ಕಾರಣ ಆಗಿರೋದು ಸಮಂತಾರ ಇನ್ಸ್ಟಾಗ್ರಾಂ ಪೋಸ್ಟ್. ಸಮಂತಾ ಪ್ರೀತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ನಿಮ್ಮನ್ನು ಹೆಚ್ಚು ದ್ವೇಷಿಸುವವರನ್ನು ನೀವು ನೋಡುತ್ತೀರಿ, ದ್ವೇಷದ ಮಾತುಗಳನ್ನು ಕೇಳುತ್ತೀರಿ, ಆದರೆ ಈ ಜಗತ್ತಿನಲ್ಲಿ ನಾವು ಕಲ್ಪಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರೀತಿ ಇದೆ ಎಂದು ಸಮಂತಾ ಬರೆದ ಇನ್ಸ್ಟಾಗ್ರಾಂ ವೈರಲ್ ಆಗುತ್ತಿದೆ.
ಆದರೆ ಸಮಂತಾ ಈ ಪೋಸ್ಟ್ ಯಾವ ಭಾವನೆಯಿಂದ ವ್ಯಕ್ತಪಡಿಸಿದ್ದಾರೆ ಎಂಬುದು ಗೊತ್ತಿಲ್ಲ. ಪ್ರೀತಿಯ ಬಗ್ಗೆ ಸಮಂತಾ ತುಂಬಾ ಪಾಸಿಟಿವ್ ಆಗಿದ್ದಾರೆ ಎನ್ನುವುದು ಈ ಪೋಸ್ಟ್ನಿಂದ ತಿಳಿದು ಬಂದಿದೆ.