ಮುಂಬೈ, ಜು 30 (DaijiworldNews/AK): ನಟ ರಣವೀರ್ ಸಿಂಗ್ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಜುಲೈ 28ರಂದು ಬಿಡುಗಡೆ ಆಗಿದೆ. ಆದರೆ ರಣವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆಗೆ ವಿಶೇಷ ಪ್ರದರ್ಶನ ವೀಕ್ಷಣೆ ಮಾಡೋದಕ್ಕೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಪತ್ನಿಯನ್ನು ವೀಕೆಂಡ್ನಲ್ಲಿ ರಣವೀರ್ ಸಿಂಗ್ ಅವರು ಸಿನಿಮಾಗೆ ಕರೆದುಕೊಂಡು ಹೋಗಿದ್ದಾರೆ.
‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ನೋಡಿದ ಬಳಿಕ ದೀಪಿಕಾ ಪಡುಕೋಣೆಯ ಪ್ರತಿಕ್ರಿಯೆ ಹೇಗಿರಬಹುದು ಎಂಬ ಪ್ರಶ್ನೆ ರಣವೀರ್ ಸಿಂಗ್ಗೆ ಮೂಡಿದೆ. ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಪ್ರಶ್ನೆಗಳು ವೈರಲ್ ಆಗಿದೆ.
‘ಆಕೆಯನ್ನು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ತೋರಿಸಲು ಕರೆದುಕೊಂಡು ಹೋಗುತ್ತಿದ್ದೇನೆ’ 1. ಆಕೆಗೆ ಇಷ್ಟ ಆಗುತ್ತದೆ. 2. ಆಕೆಗೆ ತುಂಬಾ ಇಷ್ಟ ಆಗುತ್ತದೆ. 3. ಸುಮ್ಮನೆ ಇರು, ಚಪ್ಪಲಿ ಏಟು ತಿಂತೀಯ ಹೀಗೆ ಮೂರು ಆಯ್ಕೆಯನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರಣವೀರ್ ಸಿಂಗ್ ಅವರು ಪೋಸ್ಟ್ ಮಾಡಿದ್ದಾರೆ. ಲಕ್ಷಾಂತರ ಜನರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಭಾನುವಾರ (ಜುಲೈ 30) ಬೆಳಗ್ಗೆ 7.50ರ ವೇಳೆಗೆ ಶೇಕಡ 28ರಷ್ಟು ಜನರು ‘ಆಕೆಗೆ ಇಷ್ಟ ಆಗುತ್ತದೆ’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ್ದಾರೆ. ‘ಆಕೆಗೆ ತುಂಬಾ ಇಷ್ಟ ಆಗುತ್ತದೆ’ ಎಂದು ಶೇಕಡ 38ರಷ್ಟು ಜನರು ಹೇಳಿದ್ದಾರೆ. ‘ಸುಮ್ಮನೆ ಇರು, ಚಪ್ಪಲಿ ಏಟು ತಿಂತೀಯ’ ಎಂಬ ಆಯ್ಕೆಯನ್ನು ಶೇಕಡ 34ರಷ್ಟು ಮಂದಿ ಕ್ಲಿಕ್ ಮಾಡಿದ್ದಾರೆ.
ಕರಣ್ ಜೋಹರ್ ಅವರ ನಿರ್ದೇಶನದಲ್ಲಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮೂಡಿಬಂದಿದೆ. ರಣವೀರ್ ಸಿಂಗ್ಗೆ ಜೋಡಿಯಾಗಿ ಆಲಿಯಾ ಭಟ್ ನಟಿಸಿದ್ದಾರೆ.