ಮುಂಬೈ, ಜು 22(DaijiworldNews/AK):ಬಾಲಿವುಡ್ ಬ್ಯೂಟಿ ರೇಖಾ ಅವರ ಬಯೋಗ್ರಫಿ ‘ರೇಖಾ- ದಿ ಅನ್ಟೋಲ್ಡ್ ಸ್ಟೋರಿ’ ಹೆಸರಿನಲ್ಲಿ ಸಿದ್ದಗೊಂಡಿದೆ. ಈ ಪುಸ್ತಕದಲ್ಲಿ ಲೇಖರರು ಅನೇಕ ಮೋಹಕ ತಾರೆ ರೇಖಾ ಅವರ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ತನ್ನ ಕಾರ್ಯದರ್ಶಿ ಜೊತೆಯೇ ರೇಖಾ ಲಿವ್ ಇನ್ ರಿಲೇಷನ್ ಶಿಪ್ ಹೊಂದಿದ್ದರು ಎಂದು ಬಯೋಗ್ರಪಿಯಲ್ಲಿ ಉಲ್ಲೇಖಿಸಿದ್ದಾರೆ.
ಲೇಖಕ ಯಾಸರ್ ಉಸ್ಮಾನ್ ಬರೆದ ಪುಸ್ತಕದಲ್ಲಿ ನಟಿ ರೇಖಾ ಅವರ ಸಾಕಷ್ಟು ಸಂಗತಿಗಳನ್ನು ಬರೆಯಲಾಗಿದೆ. ಅದರಲ್ಲೂ ತನ್ನ ಸೆಕ್ರೆಟರಿಯಾಗಿದ್ದ ಫರ್ಹಜಾನ್ ಜೊತೆಗಿನ ಸಂಬಂಧ ಮತ್ತು ರೇಖಾ ಅವರನ್ನು ನಿಯಂತ್ರಿಸುವ ಶಕ್ತಿ ಈಕೆಗೆ ಮಾತ್ರ ಗೊತ್ತಿತ್ತು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
ಬಾಲಿವುಡ್ನ್ ಬ್ಯುಟಿಯಾಗಿದ್ದ ರೇಖಾ ಆ ಕಾಲದಲ್ಲೇ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಕೂಡ ಅವರಾಗಿದ್ದರು. ಸೌಂದರ್ಯದ ಗಣಿಯಾಗಿದ್ದ ರೇಖಾಮತ್ತು ಅಮಿತಾಭ್ ಬಚ್ಚನ್ ನಡುವೆ ಪ್ರೇಮಾಂಕುರ ಆಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇವರಿಬ್ಬರ ಸಂಬಂಧ ಮುರಿದು ಬೀಳುತ್ತಿದ್ದಂತೆಯೇ ರೇಖಾ ಉದ್ಯಮಿಯೊಬ್ಬರನ್ನು ಮದುವೆಯಾದರು. ಆದರೆ ಉದ್ಯಮಿ ಮದುವೆಯಾದ ಕೆಲವೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರು.
ಅಂದಹಾಗೇ ರೇಖಾ ಅವರ ಬೆಡ್ ರೂಮ್ ಒಳಗೆ ಅಷ್ಟು ಸಲೀಸಾಗಿ ಯಾರೂ ಹೋಗುವಂತೆ ಇರಲಿಲ್ಲವಂತೆ . ಕೇವಲ ಸೆಕ್ರೆಟರಿ ಮಾತ್ರ ಅಲ್ಲಿಗೆ ಹೋಗುತ್ತಿದ್ದರು. ಅಲ್ಲದೇ, ರೇಖಾ ಅವರ ಫೋನ್ ಕರೆಗಳನ್ನೂ ಅವರೇ ಸ್ವೀಕರಿಸುತ್ತಿದ್ದರು. ಅಷ್ಟರ ಮಟ್ಟಿಗೆ ರೇಖಾ ಅವರನ್ನು ಸೆಕ್ರೆಟರಿ ಹಿಡಿತದಲ್ಲಿ ಇಟ್ಟುಕೊಂಡಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖವಾಗಿದೆಯಂತೆ.
ರೇಖಾ ಅವರ ಬಯೋಗ್ರಫಿ ಪುಸ್ತಕ ಇನ್ನೂ ಬಿಡುಗಡೆ ಆಗಿಲ್ಲ. ಆಗಲೇ ಬಾಲಿವುಡ್ ಅಂಗಳದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಅಲ್ಲದೇ ಈ ಪುಸ್ತಕವನ್ನು ಖರೀದಿಸಲು ರೇಖಾ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.