ಮುಂಬೈ, ಜು 21 (DaijiworldNews/AK): ರಣವೀರ್ ಸಿಂಗ್ಗೆ ತನ್ನ ಪತ್ನಿ ದೀಪಿಕಾ ಪಡುಕೋಣೆ ಕಂಡರೆ ಅದೇನೋ ಅಕ್ಕರೆ . ರಣಬೀರ್ ಮತ್ತು ದೀಪಿಕಾ ಜೋಡಿ ರೊಮ್ಯಾಂಟಿಕ್ ಆಗಿ ಸಾರ್ವಜನಿಕ ಸ್ಥಳದಲ್ಲಿ ಅದೇಷ್ಟೋ ಬಾರಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಜೋಡಿಯ ಹೊಸ ವಿಡಿಯೋ ವೈರಲ್ ಆಗಿದೆ.
ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಎಲ್ಲರಂತಲ್ಲ ಅವರ ವ್ಯಕ್ತಿತ್ವ ತುಂಬಾ ಭಿನ್ನ. ಅವರು ಯಾವ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ನಗುಮುಖದಲ್ಲಿ ಇರುವ ಅವರು ಉತ್ಸಹದಿಂದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗ ರಣವೀರ್ ಸಿಂಗ್ ಜೋಡಿ ರೆಮ್ಯಾಂಟಿಕ್ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ರ್ಯಾಂಪ್ ವಾಕ್ ಮಾಡುತ್ತ, ದೀಪಿಕಾ ಪಡುಕೋಣೆ ಹಾಗೂ ಕರಣ್ ಜೋಹರ್ಗೆ ಕೆನ್ನೆಗೆ ಕಿಸ್ ಮಾಡಿದ್ದಾರೆ. ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
ರ್ಯಾಂಪ್ ವಾಕ್ ಮಾಡುವ ವೇದಿಕೆ ಪಕ್ಕದಲ್ಲಿ ದೀಪಿಕಾ ಪಡುಕೋಣೆ, ಕರಣ್ ಜೋಹರ್ ಕುಳಿತಿದ್ದರು. ಮೊದಲು ರಣವೀರ್ ಸಿಂಗ್ ಅವರ ಪತ್ನಿ ದೀಪಿಕಾ ಪಡುಕೋಣೆ ಅವರನ್ನು ನೋಡಿದ್ದಾರೆ. ಈ ವೇಳೆ ಅವರು ಪತ್ನಿಯ ಕೆನ್ನೆಗೆ ಕಿಸ್ ಮಾಡಿದ್ದಾರೆ. ಪಕ್ಕದಲ್ಲೇ ಇದ್ದ ಕರಣ್ ಜೋಹರ್ ಕೆನ್ನೆಗೂ ರಣವೀರ್ ಸಿಂಗ್ ಕಿಸ್ ಕೊಟ್ಟಿದ್ದಾರೆ.
ರಣವೀರ್ ಸಿಂಗ್ ಹಾಗೂ ದೀಪಿಕಾ ಜೋಡಿ ಮದುವೆ ಆಗಿ ಹಲವು ವರ್ಷ ಕಳೆದಿದೆ. ಇಬ್ಬರೂ ಖುಷಿಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಕರಣ್ ಜೋಹರ್ ನಿರ್ದೇಶನದ, ರಣವೀರ್ ಸಿಂಗ್ ಹಾಗೂ ಆಲಿಯಾ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿದ್ದು, ಸಿನಿಮಾ ಜುಲೈ 28ರಂದು ರಿಲೀಸ್ ಆಗಲಿದೆ.