ಮುಂಬೈ , ಜು 18 (DaijiworldNews/AK): ಸೌತ್ ನಟಿ ತಾಪ್ಸಿ ಪನ್ನು ತನ್ನ ಚಿತ್ರಗಳಿಗಿಂತ ವಿವಾದ, ಕಾಮೆಂಟ್ಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಕಂಗನಾ ಜತೆಗಿನ ವಿವಾದ, ಸೌತ್ ಸಿನಿಮಾಗಳ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಹೀಗೆ ಹಲವು ಬಾರಿ ವಿವಾದಕ್ಕೆ ತಾಪ್ಸಿ ಕಾರಣರಾಗಿದ್ದರು. ಇತ್ತೀಚೆಗಷ್ಟೇ ತಾಪ್ಸಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಮಸ್ತ್ ಆಗಿ ಉತ್ತರ ನೀಡುವ ಮೂಲಕ ಸುದ್ದಿಯಾಗಿದೆ.
ಅಭಿಮಾನಿಯೊಬ್ಬರು ಯಾವಾಗ ಮದುವೆ ಅಂತ ಕೇಳಿದ್ದಾರೆ. ಅದಕ್ಕೆ ತಾಪ್ಸಿ ನಾನಿನ್ನೂ ಗರ್ಭಿಣಿ ಆಗಿಲ್ಲ. ಸದ್ಯಕ್ಕಂತೂ ಆಗಲ್ಲ. ಆದಾಗ ನಿಮಗೆ ತಿಳಿಸುತ್ತೇನೆ’ ಎಂದು ತಾಪ್ಸಿ ಪನ್ನು ಉತ್ತರಿಸಿದ್ದಾರೆ. ‘ಮಕ್ಕಳನ್ನು ಪಡೆಯಬೇಕು ಎನಿಸಿದಾಗ ನಾನು ಮದುವೆ ಆಗುತ್ತೇನೆ’ ಎಂದು ಈ ಹಿಂದಿನ ಸಂದರ್ಶನದಲ್ಲಿ ಅವರು ಹೇಳಿದ್ದರು. ಇದೀಗ ಗರ್ಬೀಣಿ ಆಗಿಲ್ಲ ಎಂದು ಹೇಳಿದ್ದಾರೆ.
ತಾಪ್ಸಿಗೆ ಈಗ 35 ವರ್ಷ ವಯಸ್ಸಾಗಿದೆ. ಸೌತ್ ಬ್ಯುಸಿ ನಟಿ ತಾಪ್ಸಿ ಪನ್ನು ಇದೀಗ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ನಟಿ, ತಾಪ್ಸಿ ಪನ್ನು ಈಗ ಟ್ರಿಪ್ ಮಾಡುವ ಮೂಡ್ನಲ್ಲಿದ್ದಾರೆ. ಇದರ ಮಧ್ಯೆ ಅಭಿಮಾನಿಗಳ ಜೊತೆ ಮಾತನಾಡಲು ಕೊಂಚ ಬಿಡುವು ಮಾಡಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ನಟಿ, ಫ್ಯಾನ್ಸ್ ಜೊತೆ ಪ್ರಶ್ನಾವಳಿಯನ್ನ ಮಾಡಿದ್ದಾರೆ. ಈ ವೇಳೆ ಮದುವೆ ಯಾವಾಗ ಎಂಬ ಪ್ರಶ್ನೆ ಅವರಿಗೆ ಎದುರಾಗಿದೆ. ತೆಲುಗು, ತಮಿಳು ಮತ್ತು ಬಾಲಿವುಡ್ ಸಿನಿಮಾಗಳಲ್ಲೂ ತಾಪ್ಸಿ ಪನ್ನು ನಟಿಸಿ ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿದ್ದಾರೆ. 2021-2022ರಲ್ಲಿ ಸಾಲು ಸಾಲಾಗಿ ಆರು ಸಿನಿಮಾಗಳನ್ನ ಹಿಟ್ ನೀಡಿದ್ದರು. ಈಗ ಅವರು ಬ್ರೇಕ್ ತೆಗೆದುಕೊಂಡಿದ್ದಾರೆ.
ಬ್ಯಾಡ್ಮಿಂಟನ್ ಆಟಗಾರ, ಕೋಚ್ ಮಥಾಯಿಸ್ ಬೋ ಅವರ ಜೊತೆ ತಾಪ್ಸಿ ಪನ್ನು ಬಹಳ ಕಾಲದಿಂದ ಎಂಗೇಜ್ ಆಗಿದ್ದಾರೆ. ಪ್ರಿಯಕರನ ಜೊತೆ ಅವರು ಆಗಾಗ ಟ್ರಿಪ್ ಮಾಡುತ್ತಾರೆ. ಆ ಫೋಟೋಗಳನ್ನು ಕೂಡ ಅವರು ಹಂಚಿಕೊಳ್ಳುತ್ತಾರೆ.