ಮುಂಬೈ, ಜು 14 (DaijiworldNews/HR): ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ತನ್ನ ಪುತ್ರಿ ಪುತ್ರಿ ಅಥಿಯಾ ಶೆಟ್ಟಿಯ ಪತಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಅವರಿಗೆ ಜಾಸ್ತಿ ಒಳ್ಳೆಯ ಹುಡುಗನಾಗಿರಬೇಡ ಎಂದು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಸುನಿಲ್ ಶೆಟ್ಟಿ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ಅದರಲ್ಲಿ ಅವರಿಗೆ ಮಗಳು ಮತ್ತು ಅಳಿಯನಿಗೆ ಏನು ಸಲಹೆ ನೀಡುತ್ತೀರಿ ಎನ್ನುವ ಪ್ರಶ್ನೆ ಕೇಳಲಾಗಿತ್ತು.
ಅದಕ್ಕೆ ಉತ್ತರಿಸಿದ ಸುನಿಲ್ ಶೆಟ್ಟಿ, ನಾನು ನನ್ನ ಮಗಳು ಇಂಡಸ್ಟ್ರಿಗೆ ಬರುವಾಗಲೇ ಅವಳಿಗೆ ಹೇಳಿದ್ದೆ, ಯಶಸ್ಸಿನ ಬಗ್ಗೆ ಭಯ ಬೇಡ ಹಾಗೆಯೇ ಸೋಲನ್ನು ಎದುರಿಸುವುದಕ್ಕೂ ಸಿದ್ಧವಿರು ಎಂದಿದ್ದೆ. ಇನ್ನು ನಿನ್ನ ಸಂಗಾತಿಯನ್ನು ಕುರುಡರ ರೀತಿಯಲ್ಲಿ ನಂಬು. ಅವನೊಬ್ಬ ಕ್ರೀಡಾಪಟು. ಪ್ರಯಾಣ ಮಾಡುತ್ತಿರುತ್ತಾನೆ. ಎಲ್ಲ ಕಡೆಗೆ ನಿನ್ನನ್ನು ಕರೆದುಕೊಂಡು ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ನೀನು ಎಲ್ಲ ಸಮಯದಲ್ಲಿಯೂ ಅವನ ಪರವಾಗಿಯೇ ಇರಬೇಕು ಎಂದರು.
ಇನ್ನು ನಿಮ್ಮ ಬಗ್ಗೆ ಕೀಳರಿಮೆ ತೋರುವ ಜನರಿಗೂ ನೀವು ತುಂಬಾ ಒಳ್ಳೆಯವರಾಗಿರುವುದು ಬೇಡ. ಅಥಿಯಾಗೆ ನೀನು ಅದೃಷ್ಟವಂತೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ ಎಂದು ಅಳಿಯನಿಗೆ ಸಲಹೆ ನೀಡಿದ್ದಾರೆ.