ಮುಂಬೈ, ಜು 12 (DaijiworldNews/AK) ನನ್ನ ಸಂಸಾರ ಬಿರುಕು ಮೂಡಲು ಪ್ರೀತಿ ಜಿಂಟಾವೇ ಕಾರಣ ಎಂದು ಗಾಯಕಿ, ನಟಿ ಸುಚಿತ್ರಾ ಕೃಷ್ಣಮೂರ್ತಿ ಆರೋಪಿಸಿದ್ದಾರೆ.
ನಟಿ ಸುಚಿತ್ರಾ ಕೃಷ್ಣಮೂರ್ತಿ ಹಾಗೂ ಬಾಲಿವುಡ್ ನಿರ್ದೇಶಕ ಶೇಖರ್ ಕಪೂರ್ 1997ರಲ್ಲಿ ಮದುವೆ ಆಗಿದ್ದರು. ಕೆಲವೇ ವರ್ಷದಲ್ಲಿ ಇವರ ಸಂಸಾರ ಮುರಿದು ಬಿತ್ತು. ಇದಕ್ಕೆಲ್ಲ ನಟಿ ಪ್ರೀತಿ ಜಿಂಟಾ ಕಾರಣ. ಪ್ರೀತಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಸುಚಿತ್ರಾ ನೇರವಾಗಿ ಸಂದರ್ಶನ ದಲ್ಲಿ ಹೇಳಿಕೊಂಡಿದ್ದಾರೆ.
ತಮಗಿಂತ 30 ವರ್ಷ ದೊಡ್ಡವರಾದ ಶೇಖರ್ ಕಪೂರ್ ಅವರನ್ನು ಸುಚಿತ್ರಾ ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಈ ದಂಪತಿಗೆ ಹೆಣ್ಣು ಮಗು ಜನಿಸಿತು. ನಂತರ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಿ 2006ರಲ್ಲಿ ವಿಚ್ಛೇದನ ಪಡೆದರು. ಮದುವೆಗೂ ಮುನ್ನ ಸುಚಿತ್ರಾಗೆ ಸಿನಿಮಾದಲ್ಲಿ ಸಾಕಷ್ಟು ಬೇಡಿಕೆ ಇತ್ತು. ಮದುವೆಯ ನಂತರ ಸಿನಿಮಾ ಬೇಡಿಕೆ ಕಮ್ಮಿ ಆಯಿತು.
ಇತ್ತೀಚಿನ ಸಂದರ್ಶನವೊಂದರಲ್ಲಿ ಸುಚಿತ್ರಾ ‘ಶೇಖರ್ ಕಪೂರ್ ಪ್ರೀತಿಯಲ್ಲಿ ಪ್ರಾಮಾಣಿಕತೆ ಇರಲಿಲ್ಲ. ನಟಿ ಪ್ರೀತಿ ಜಿಂಟಾ ಅವರೊಂದಿಗೆ ಶೇಖರ್ ಹತ್ತಿರವಾಗಿದ್ದರು, ನಾನು ಪ್ರೀತಿಯನ್ನು ಎಂದಿಗೂ ಕ್ಷಮಿಸುವುದಿಲ್ಲ’ ಎಂದಿದ್ದಾರೆ. ಈ ಮೂಲಕ ಪ್ರೀತಿ ಜಿಂಟಾ ಅವರೇ ವಿಚ್ಛೇದನಕ್ಕೆ ಕಾರಣ ಎಂದು ಅವರು ದೂಷಿಸಿದ್ದಾರೆ.
ಈ ಹಿಂದೆ ಕೂಡ ಸುಚಿತ್ರಾ ಅವರು , ಪ್ರೀತಿ ಜಿಂಟಾ ವಿರುದ್ಧ ಆರೋಪ ಮಾಡಿದ್ದರು, ಆದರೆ ಸುಚಿತ್ರಾ ಆರೋಪಗಳನ್ನು ಪ್ರೀತಿ ತಳ್ಳಿಹಾಕಿದ್ದಾರೆ. ‘ಸುಚಿತ್ರಾ ಅವರೇ ನನ್ನ ಜೊತೆ ಹಾಗೆ ಮಾತಾಡಬೇಡಿ. ನಿಮ್ಮ ಮನಸ್ಥಿತಿ ಸರಿಯಿಲ್ಲ. ನೀವು ಮನೋವೈದ್ಯರನ್ನು ಭೇಟಿ ಮಾಡುವುದು ಉತ್ತಮ’ ಎಂದು ಪ್ರೀತಿ ಪ್ರತಿಕ್ರಿಯೆ ನೀಡಿದ್ದರು.
ಈ ಬಗ್ಗೆಯೂ ಸುಚಿತ್ರಾವರಿಗೆ ಪ್ರಶ್ನೆಯನ್ನ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಸುಚಿತ್ರಾ. ನನಗೆ ಅವರ ಪ್ರತಿಕ್ರಿಯೆ ಬೇಕಿಲ್ಲ. ಅವರಿಗೆ ಏನು ಅನ್ನಿಸಿತೋ ಅದನ್ನು ಅವರು ಹೇಳಬಹುದು. ನಾನು ಗೃಹಿಣಿ ಆಗಿರುವುದಕ್ಕೆ ಖುಷಿ ಇದೆ. ಕಳೆದ 20 ವರ್ಷದಿಂದ ತಾಯಿ ಆಗಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.