ಮುಂಬೈ ಜು 11 (DaijiworldNews/Ak) ಇದೀಗ ಕನ್ನಡದ ‘ಐರಾವತ’ ಚಿತ್ರದ ನಟಿ ಊರ್ವಶಿ ರೌಟೇಲಾ ಚಿತ್ರರಂಗದಲ್ಲಿ ಬಾರೀ ಸದ್ದು ಮಾಡುತ್ತಿದ್ದಾರೆ. ಅವರು ಮೂರು ನಿಮಿಷದ ನಟನೆಗೆ 3ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬುವುದು ಸುದ್ದಿಯಾಗುತ್ತಿದೆ.
ತೆಲುಗಿನ ಬೋಯಪತಿ ಶ್ರೀನು- ರಾಮ್ ಪೋತಿನೇನಿ ನಟನೆಯ ಸಿನಿಮಾದಲ್ಲಿ ಕೇವಲ 3 ನಿಮಿಷ ಕ್ಕೆ 3 ಕೋಟಿ ರೂಪಾಯಿ ಅಂದರೆ ಒಂದು ನಿಮಿಷಕ್ಕೆ ಬರೋಬರಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಮೂರೇ ನಿಮಿಷಕ್ಕೆ 3 ಕೋಟಿ ಸಂಭಾವನೆ ಪಡೆಯುತ್ತಾ ಇರೋದು ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕಿ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಾಲ್ತೇರ್ ವೀರಯ್ಯ’ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಹಾಡು ಪಡ್ಡೆಹುಡುಗರ ನಿದ್ದೆಗೆಡಿಸಿತ್ತು. ಈ ಹಾಡಿಗೆ ಹೆಜ್ಜೆ ಹಾಕಲು ನಟಿ 2 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ಚಿತ್ರರಂಗದಲ್ಲಿ ಸುದ್ದಿಯಲಿದ್ದರು. ಈಗ ರಾಮ್ ಪೋತಿನೇನಿ ಸಿನಿಮಾದ ಮೂಲಕ ಮಾದಕ ಚೆಲುವೆ ಸದ್ದು ಮಾಡುತ್ತಿದ್ದಾರೆ.
ಊರ್ವಶಿ ಅವರು ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿಯಿದೆ. ಈ ಚಿತ್ರಕ್ಕೂ ದುಬಾರಿ ಸಂಭಾವನೆಯನ್ನೇ ನಟಿ ಬೇಡಿಕೆಯಿಟ್ಟಿದ್ದಾರೆ. ಒಟ್ಟಾರೆ ನಾಯಕಿಯಾಗಿ ಬೇಡಿಕೆ ಇರೋದಕ್ಕಿಂತ ಐಟಂ ಸಾಂಗ್ಗೆ ಸ್ಟೆಫ್ ಹಾಕಲು ಉರ್ವಶಿ ಚೆಲುವೆಗೆ ಬೇಡಿಕೆ ಹೆಚ್ಚಾಗಿದೆ.