ಬೆಂಗಳೂರು, ಜು 09 (DaijiworldNews/AK) ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ‘ಘೋಸ್ಟ್’ ಸಿನಿಮಾದ ಬಿಗ್ ಡ್ಯಾಡಿ ಪೋಸ್ಟರ್ ಬಿಡುಗಡೆಯಗಿದೆ. ಈ ಪೋಸ್ಟರ್ನಲ್ಲಿ ಶಿವರಾಜ್ಕುಮಾರ್ ರೈಫಲ್ ಹಿಡಿದು ನಿಂತಿರುವ ನೋಟ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
"ಘೋಸ್ಟ್" ಸಿನಿಮಾ ನಿರ್ದೇಶಕ ಎಂ.ಜಿ. ಶ್ರೀನಿವಾಸ್ ಅವರ ಹುಟ್ಟುಹಬ್ಬವಾದ ಇಂದು ಡ್ಯಾಡಿ ಪೋಸ್ಟರ್ ನ್ನು ಹಂಚಿಕೊಳ್ಳುವ ಮೂಲಕ ಶಿವಣ್ಣ ಅಭಿಮಾನಿಗೆ ಸಂತಸದ ಸುದ್ದಿಯನ್ನು ನೀಡಿದ್ದಾರೆ.
ಸದ್ಯ ಘೋಸ್ಟ್ ಸಿನಿಮಾದ ಫೊಸ್ಟರ್ ನಿಂದ ಅಭಿಮಾನಿವಲಯದಲ್ಲಿ ಈಗ ಬಿಗ್ ಡ್ಯಾಡಿ ಬಗ್ಗೆ ಚರ್ಚೆಯಾಗುತ್ತಿದೆ. ಬಿಗ್ ಡ್ಯಾಡಿ ಎಂಬ ಪೋಸ್ಟರ್ನಲ್ಲಿರುವ ಶಿವಣ್ಣನ ಲುಕ್ ನೋಡಿ ಏನಿದರ ಕತೆ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಈ ಎಲ್ಲ ಅಭಿಮಾನಿಗಳ ಪ್ರಶ್ನೆಗೆ ಜುಲೈ 12ರಂದು ಬ್ರೇಕ್ ಬೀಳಲಿದೆ. ಶಿವರಾಜ್ ಕುಮಾರ್ ನಟಿಸುತ್ತಿರುವ "ಘೋಸ್ಟ್" ಸಿನಿಮಾದಿಂದ ಬಿಗ್ ಡ್ಯಾಡಿ ವಿಡಿಯೊ ರಿಲೀಸ್ ಅಗಲಿದೆ.
ಇದೇ ಜುಲೈ 12ರಂದು ಹೀರೋ ಶಿವಣ್ಣ ಅವರ ಜನ್ಮದಿನದಂದು ‘ಘೋಸ್ಟ್’ ಸಿನಿಮಾ ತಂಡದಿಂದ ‘ಬಿಗ್ ಡ್ಯಾಡಿ’ ವೀಡಿಯೋ ರಿಲೀಸ್ ಆಗಲಿದೆ. ಅಂದು ಬೆಳಗ್ಗೆ 11.45ಕ್ಕೆ ಬಿಗ್ ಡ್ಯಾಡಿ ಪರಿಚಯ ಆಗಲಿದೆ. ಈ ಮೂಲಕ ಬಿಗ್ ಡ್ಯಾಡಿ ಅಂದರೆ ಏನು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.
ಇಂದು ನಿರ್ದೇಶಕ ಎಂ.ಜಿ. ಶ್ರೀನಿವಾಸ್ ಅವರ ಹುಟ್ಟುಹಬ್ಬದಂದು ಪೋಸ್ಟರ್ ರಿವೀಲ್ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.. ಕನ್ನಡ ಚಿತ್ರರಂಗದಲ್ಲಿ ಶ್ರೀನಿವಾಸ್ ಅವರು ನಟನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ‘ಘೋಸ್ಟ್’ ಚಿತ್ರದಲ್ಲಿ ಅವರು ಶಿವಣ್ಣ ಜೊತೆ ಕೈ ಜೋಡಿಸಿರುವುದರಿಂದ ಹೈಪ್ ಹೆಚ್ಚಾಗಿದೆ.
‘ಘೋಸ್ಟ್’ ಸಿನಿಮಾವನ್ನು ಸಂದೇಶ್ ಎನ್. ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ಸಂದೇಶ್ ಪ್ರೊಡಕ್ಷನ್ಸ್’ ಸಂಸ್ಥೆ ಮೂಲಕ ಅದ್ದೂರಿ ಬಜೆಟ್ನಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ. ಅಭಿಮಾನಿಗಳು ಈ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶಿವರಾಜ್ಕುಮಾರ್ ಜೊತೆ ಜಯರಾಂ, ಅನುಪಮ್ ಖೇರ್, ಸತ್ಯಪ್ರಕಾಶ್, ದತ್ತಣ್ಣ, ಅಭಿಜಿತ್, ಪ್ರಶಾಂತ್ ನಾರಾಯಣನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.