ಮುಂಬೈ, ಜು 06 (DaijiworldNews/HR): ಬಾಲಿವುಡ್ ನಲ್ಲಿ ಈಗಾಗಲೇ ಮೀಟೂ ಆರೋಪದ ಮೂಲಕ ಸುದ್ದಿಯಾಗಿದ್ದ ನಟಿ ಪಾಯಲ್ ಘೋಷ್ ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಪಾಯಲ್ ಈಗ 11ನೇ ಸಿನಿಮಾವನ್ನು ಮುಗಿಸಿದ್ದು, ಈ ವೇಳೆ ನಾನು ನನ್ನ ದೇಹವನ್ನು ಅವರೊಂದಿಗೆ ಹಂಚಿಕೊಂಡಿದ್ದರೆ, ಇಷ್ಟೊತ್ತಿಗೆ 30 ಚಿತ್ರಗಳನ್ನು ಮಾಡಿರುತ್ತಿದ್ದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಈ ಹಿಂದೆ ಅನೇಕ ನಿರ್ದೇಶಕರ ಮತ್ತು ನಿರ್ಮಾಪಕರ ಬಗ್ಗೆ ಮಾತನಾಡಿದ್ದ ಪಾಯಲ್, ಇದೀಗ ಮತ್ತೊಂದು ಬಾಂಬ್ ಸಿಡಿಸಿ ಸುದ್ದಿಯಲ್ಲಿದ್ದಾರೆ.