ಮುಂಬೈ, ಜು 04:(DaijiworldNews/AK): ಮುಂಬೈನ ರಸ್ತೆಗಳಲ್ಲಿ ನರಿ ವೇಷ ಹಾಕಿಕೊಂಡು ಕೈಯಲ್ಲಿ ಒಂದು ಬೋರ್ಡ್ ಹಿಡಿದುಕೊಂಡು ಬಾಲಿವುಡ್ ನಿದೇರ್ಶಕ ಹೇಮಂತ್ ತಿವಾರಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದು, ಇದೀಗ ಅವರ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ತಿವಾರಿ ಅವರ‘ಲೋಮಡ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಆಗಸ್ಟ್ 4ರಂದು ಚಿತ್ರ ಬಿಡುಗಡೆಗೊಳ್ಳಲಿದೆ. ಹೀಗಾಗಿ ಹೊಸ ರೀತಿಯಲ್ಲಿ ಪ್ರಚಾರ ಮಾಡಲು ಚಿತ್ರತಂಡ ಮುಂದಾಗಿದ್ದು, ನಿರ್ದೇಶಕ ಹೇಮಂತ್ ತಿವಾರಿ ಅವರು ನರಿ ವೇಷ ಹಾಕಿಕೊಂಡು ಬೀದಿಗೆ ಇಳಿದಿದ್ದಾರೆ.
‘ಲೋಮಡ್’ ಎಂದರೆ ಹಿಂದಿಯಲ್ಲಿ ನರಿ ಎಂದರ್ಥ. ಹಾಗಾಗಿ ಸ್ವತಃ ನಿರ್ದೇಶಕರೇ ನರಿ ವೇಷ ಹಾಕಿಕೊಂಡು ಮುಂಬೈನ ಬೀದಿಯಲ್ಲಿ ಪ್ರಮೋಷನ್ ಮಾಡುತ್ತಿದ್ದಾರೆ. ಬಾಲಿವುಡ್ನಲ್ಲಿ ಸಿನಿಮಾ ಪ್ರಮೋಷನ್ ಮಾಡಬೇಕು ಎಂದರೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಆದರೆ ಅಷ್ಟೆಲ್ಲ ಖರ್ಚು ಮಾಡಲು ‘ಲೋಮಡ್’ ತಂಡದ ಬಳಿ ಬಜೆಟ್ ಇಲ್ಲದ ಹಿನ್ನಲ್ಲೆಯಲ್ಲಿ ಅವರು ರಸ್ತೆಗೆ ಇಳಿದು ಫ್ರೋಮಷನ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಈ ಸಿನಿಮಾ ವಿಶೇಷವಾಗಿ ಕಪ್ಪು-ಬಿಳಿ ಬಣ್ಣದಲ್ಲಿ ಮೂಡಿಬಂದಿದ್ದು, ಇದು ಸಿಂಗಲ್ ಟೇಕ್ ಸಿನಿಮಾವಾಗಿದೆ. ಅಂದರೆ, ಸಿನಿಮಾದ ಮೊದಲ ದೃಶ್ಯದಿಂದ ಕೊನೇ ದೃಶ್ಯದವರೆಗಿನ ಎಲ್ಲ ದೃಶ್ಯಗಳನ್ನು ಕ್ಯಾಮಾರ ಬಂದ್ ಮಾಡದೆ ಒಂದೇ ಟೇಕ್ನಲ್ಲಿ ಚಿತ್ರಿಸಲಾಗಿದೆ ಎನ್ನುವುದು ವಿಶೇಷ.