ಬೆಂಗಳೂರು ಜೂ 11 (DaijiworldNews/HR): ನಟ, ನಿರ್ದೇಶಕ ಪ್ರಭುದೇವ ಅವರು 50 ವಯಸ್ಸಿನಲ್ಲಿ ಹೆಣ್ಣು ಮಗುವಿನ ತಂದೆಯಾಗಿದ್ದು, ಪ್ರಭುದೇವ ಅವರ ಎರಡನೇ ಪತ್ನಿ ಹಿಮಾನಿ ಸಿಂಗ್ ಗೆ ಇಂದು ಮಗುವಿಗೆ ಜನ್ಮ ನೀಡಿದ್ದಾರೆ.
ಪ್ರಭುದೇವ ಅವರ ಮೊದಲ ಪತ್ನಿಯಿಂದ ಗಂಡು ಮಗು ಪಡೆದಿದ್ದರು. ಆದರೆ ಮಗು ಅಕಾಲಿಕ ಮರಣ ಹೋಂದಿತ್ತು. ಮೊದಲ ಪತ್ನಿ ಜೊತೆಗಿನ ಹೊಂದಾಣಿಕೆಯ ಕೊರತೆಯಿಂದಾಗಿ ಡಿವೋರ್ಸ್ ಪಡೆದಿದ್ದಾರೆ.
ಇನ್ನು ಕೋವಿಡ್ ಸಂದರ್ಭದಲ್ಲಿ ವೃತ್ತಿಯಲ್ಲಿ ವೈದ್ಯಯಾಗಿರುವ ಹಿಮಾನಿ ಸಿಂಗ್ ಅವರೊಂದಿಗೆ ಡೇಟ್ ಮಾಡಿದ್ದ ಪ್ರಭುದೇವ ಬಳಿಕ ಮದುವೆಯಾಗಿ ಇದೀಗ ಹಿಮಾನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.