ಬೆಂಗಳೂರು, ಜೂ 07 (DaijiworldNews/MS): ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರ ಮೂರನೇ ಪುಣ್ಯತಿಥಿ ಇಂದು. ಎಲ್ಲೆಡೆ ಚಿರು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ಮರಿಸಿಕೊಳ್ಳುತ್ತಿರಬೇಕಾದರೆ, ನಟಿ ಮೇಘನಾ ರಾಜ್ ಕೂಡ ತಮ್ಮ ಪತಿಯನ್ನು ನೆನೆದು ಇನ್ಸ್ಟಾದಲ್ಲಿ ಭಾವುಕ ಪೋಸ್ಟ್ ಹಾಕಿದ್ದಾರೆ.
ಪತಿಯೊಂದಿಗೆ ಇರುವ ಫೋಟೊ ಶೇರ್ ಮಾಡಿರುವ ಅವರು 'ನನ್ನ ಪಾಲಿನ ನಿನ್ನೆ, ಇಂದು ಮತ್ತು ಭವಿಷ್ಯವೂ ನೀನೇ' ಎಂದು ಬರೆದಿದ್ದಾರೆ. ಮೇಘನಾ ಪೋಸ್ಟ್ಗೆ ಅಭಿಮಾನಿಗಳು ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಮದುವೆಯಾಗಿ ವರ್ಷದೊಳಗೆ ಪತಿಯನ್ನು ಕಳೆದುಕೊಂಡ ಮೇಘನಾ ರಾಜ್ ಅದೇ ನೋವಿನಲ್ಲೇ ಜೀವನ ಸಾಗಿಸುತ್ತಿದ್ದಾರೆ. ಚಿರು ಇಲ್ಲ ಎನ್ನುವ ಸತ್ಯವನ್ನು ಇನ್ನೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಘನಾ ಸದ್ಯ ಮುದ್ದಾದ ಮಗನ ಜೊತೆ ಜೀವನ ನಡೆಸುತ್ತಿದ್ದಾರೆ.