ಬೆಂಗಳೂರು, ಜೂ 05 (DaijiowrldNews/HR): ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ನಟ ಅಭಿಷೇಕ್ ಮತ್ತು ಅವಿವಾ ಬಿಡಪ್ಪ ವೈವಾಹಿಕ ಜೀವನಕ್ಕೆ ಇಂದು ಕಾಲಿಟ್ಟಿದ್ದಾರೆ.
ಬೆಂಗಳೂರಿನ ಮಾಣಿಕ್ಯ ವಜ್ರ ಮಂಟಪದಲ್ಲಿ ಗೌಡರ ಸಂಪ್ರದಾಯದಂತೆ ಅಭಿಷೇಕ್ ಮತ್ತು ಅವಿವಾ ಬಿಡಪ್ಪ ಅವರ ವಿವಾಹ ಶಾಸ್ತ್ರ ನೆರವೇರಿತ್ತು.
ಮದುವೆ ಸಮಾರಂಭಕ್ಕೆ ಸೂಪರ್ ಸ್ಟಾರ್ ರಜಿನಿಕಾಂತ್, ನಟ ಯಶ್, ನಟಿ ಸುಹಾಸಿನಿ, ಟಾಲಿವುಡ್ ನಟರಾದ ಮೋಹನ್ ಬಾಬು, ಮಂಚು ಮನೋಜ್, ನಟ ನರೇಶ್, ಪವಿತ್ರ, ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ.
ಖ್ಯಾತ ಫ್ಯಾಷನ್ ಡಿಸೈನರ್ ಆಗಿರುವ ಪ್ರಸಾದ್ ಬಿಡಪ್ಪ ಅವರ ಪುತ್ರಿ ಅವಿವಾ ಬಿಡಪ್ಪ ಅವರೊಂದಿಗೆ ಅಭಿಷೇಕ್ ಅವರು ಕಳೆದ ವರ್ಷ ಡಿ.11 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.