ಮುಂಬೈ, ಜೂ 03 (DaijiworldNews/HR): ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮದುವೆಯಾಗಿ ಇಂದಿಗೆ 50 ವರ್ಷಗಳು ತುಂಬಿದ್ದು, ಅಭಿಮಾನಿಗಳು ಸೇರಿದಂತೆ ಪುತ್ರಿ ಶ್ವೇತಾ ಬಚ್ಚನ್ ಶುಭ ಹಾರೈಸಿದ್ದಾರೆ.
ಜಯಾ ಬಚ್ಚನ್ ಅವರನ್ನು ಅಮಿತಾಭ್ ಮದುವೆಯಾಗಿ ಐವತ್ತು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಪುತ್ರಿ ಶ್ವೇತಾ ಬಚ್ಚನ್ ಅವರು ಇನ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ.
ಈ ಸಂದರ್ಭವನ್ನು ಅಮಿತಾಭ್ ಬಚ್ಚನ್ ಅವರು ಕೂಡ ವಿಶೇಷವಾಗಿ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದು, ಕೆಲವೇ ಹೊತ್ತಿನಲ್ಲಿ ಜೂನ್ 3ನೇ ತಾರೀಖು ಬರುತ್ತದೆ. ನಾವಿಬ್ಬರೂ ಮದುವೆಯಾಗಿ ಐವತ್ತು ವರ್ಷ ತುಂಬುತ್ತದೆ ಎಂದು ಪತ್ನಿಗೆ ಅವರು ನೆನಪಿಸಿದ್ದಾರೆ.