ಮುಂಬೈ, ಜೂನ್ 01 (DaijiworldNews/KH): ಕಳೆದ ಕೆಲ ವರ್ಷಗಳಿಂದ ಅರ್ಜುನ್ ಹಾಗೂ ಮಲೈಕಾ ಪ್ರೀತಿಸುತ್ತಿದ್ದಾರೆ ಇವರಿಬ್ಬರ ನಡುವಿನ ರಿಲೇಷನ್ಶಿಪ್ ಬೇರೆ ಬೇರೆ ವಿಷಯಗಳು ಪದೇ ಪದೇ ಚರ್ಚೆಯಲ್ಲಿರುತ್ತದೆ. ಅದೇ ರೀತಿ ಕಳೆದ ನವೆಂಬರ್ ನಲ್ಲಿ ವೆಬ್ ಸೈಟ್ ವೊಂದು ಮಲೈಕಾ ಆರೋರಾ ಗರ್ಭಿಣಿ ಎನ್ನುವ ಸುದ್ದಿಯೊಂದನ್ನು ಬಿತ್ತರಿಸಿ ಮಲೈಕಾ ತಾಯಿ ಆಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಸುದ್ದಿ ಸುಳ್ಳು ಸುದ್ದಿಯೆಂದು ಗೊತ್ತಾಗಿದ್ದು, ಇದಕ್ಕೆ ನಟ ಅರ್ಜುನ್ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳ ಹಿಂದೆ ಮಲೈಕಾ ಆರೋರಾ ಅವರು ಅರ್ಜುನ್ ಕಪೂರ್ ಅವರ ಅರೆ ಬೆತ್ತಲೆ ಫೋಟೋವೊಂದನ್ನು ಸ್ಟೋರಿಯಲ್ಲಿ ಹಂಚಿಕೊಂಡಿದ ಬಳಿಕ ಈ ಸುದ್ದಿ ವೈರಲ್ ಆಗಿತ್ತು. ಅರ್ಜುನ್ ಕಪೂರ್ ಇದೇ ವಿಚಾರವಾಗಿ ಮಾತನಾಡಿದ್ದಾರೆ. “ನೆಗೆಟಿವಿಟಿಯನ್ನು ಹರಡುವುದು ಸುಲಭ. ಎಲ್ಲೆಡೆ ನೆಗೆಟಿವ್ ವಿಚಾರಗಳ ಬಹುಬೇಗನೇ ಹರಡುವುದರಿಂದ ಜನ ಅದರತ್ತ ಹೆಚ್ಚು ಗಮನ ಹರಿಸುತ್ತಾರೆ.
ನಾವು ನಟರು, ನಮ್ಮ ವೈಯಕ್ತಿಕ ಜೀವನ ಯಾವಾಗಲೂ ತುಂಬಾ ಖಾಸಗಿಯಾಗಿರುವುದಿಲ್ಲ. ನಾವೆಲ್ಲರೂ ಮನುಷ್ಯರು ಎಂಬ ಕನಿಷ್ಠ ಅರಿವು ನಮಗಿರಬೇಕು. ಆದ್ದರಿಂದ, ಸುದ್ದಿಯನ್ನು ಬರೆಯುವಾಗ ಒಮ್ಮೆ ಆ ವಿಚಾರ ಸುಳ್ಳಾ ಅಥವಾ ನಿಜಾನ ಅಂತ ಪರಿಶೀಲಿಸಿ. ಸುಮ್ಮನೆ ನೀವೇ ಊಹಿಸಿ ಎಲ್ಲವನ್ನೂ ಬರೆಯಬೇಡಿ ಎಂದು ಹೇಳಿದ್ದಾರೆ.