ಮುಂಬೈ, ಮೇ 29 (DaijiworldNews/KH): ನಟಿ ಸ್ನೇಹಲ್ ರೈ ತಮ್ಮ ಇತ್ತೀಚಿನ ಪೋಸ್ಟ್ ಮೂಲಕ ಮದುವೆಯಾಗಿದೇನೆಂಬ ಸುದ್ದಿಯೊಂದು ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದೆ.
ನಟ-ನಟಿಯರು ರಾಜಕರಣೀಯಗಳ ಜೊತೆ ಮುಚ್ಚು ಮರೆಯಾಗಿ ಮಾದುವೆಯಾಗೋದು ಹೊಸತ್ತೇನಲ್ಲ ಈ ಲಿಸ್ಟ್ಗೆ ಇತ್ತೀಚೆಗೆ ಸೇರಿಕೊಂಡ ನಟಿ ಸ್ನೇಹಲ್ ರೈ. ತನಗಿಂತ 21 ವರ್ಷ ಹಿರಿಯ ರಾಜಕಾರಣಿಯನ್ನು ಮದುವೆಯಾಗಿದರೆಂದು ಹೇಳಿದ್ದಾರೆ.
ನಟಿ ತನ್ನ ಮದುವೆಯ ಬಗ್ಗೆ ಮಾತನಾಡಿದ್ದು ಈಗ ಇವರು ವಿವಾಹಿತ ಮಹಿಳೆಯರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ರೆಡಿಯಾಗಿದ್ದಾರೆ. ಹೀಗಾಗಿ ನಟಿ ತಮ್ಮ ಮದುವೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಮುಂದಾಗಿದ್ದಾರೆ. ತನಗಿಂತ 21 ವರ್ಷ ಹಿರಿಯ ರಾಜಕಾರಣಿಯನ್ನು ತಾನು ಮದುವೆಯಾಗಿರುವುದಾಗಿ ನಟಿ ಹೇಳಿಕೊಂಡಿದ್ದಾರೆ.
ಹತ್ತು ವರ್ಷದ ಹಿಂದೆಯೇ ಸ್ನೇಹಲ್ ರೈ ಅವರು ಮಧ್ವೇಂದ್ರ ಕುಮಾರ್ ರೈ ಎನ್ನುವ ರಾಜಕಾರಣಿಯ ಜೊತೆ ಮದುವೆ ಆಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕಾರ್ಯಕ್ರವೊಂದರಲ್ಲಿ ತಮ್ಮಿಬ್ಬರ ಭೇಟಿ ಆಯಿತು ಎಂದು, ನಂತರ ಕುಟುಂಬದ ಸಮ್ಮತಿಯೊಂದಿಗೆ ಮದುವೆ ಆಗಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ಪತಿ ಮತ್ತು ತಮ್ಮ ನಡುವಿನ ವಯಸ್ಸಿನ ಅಂತರವನ್ನೂ ಅವರು ಹೇಳಿದ್ದಾರೆ.
ಟಿವಿ ನಟಿ ಸ್ನೇಹಲ್ ರೈ ಅವರು ರಾಜಕಾರಣಿ ಮಾಧವೇಂದ್ರ ಕುಮಾರ್ ರೈ ಅವರನ್ನು 10 ವರ್ಷ ಹಿಂದೆಯೇ ಮದುವೆಯಾಗಿರುವುದಾಗಿ ಹೇಳಿದ್ದಾರೆ. ಆದರೆ ಈ ನಟಿ ಎಂದೂ ತಮ್ಮ ಮೆರಿಟಲ್ ಸ್ಟೇಟಸ್ ಬಹಿರಂಗಪಡಿಸಿರಲಿಲ್ಲ. ಹಾಗೆಯೇ ವೈವಾಹಿಕ ಸಂಬಂಧ ಮುಚ್ಚಿಡಲೂ ಪ್ರಯತ್ನಿಸಲಿಲ್ಲ.
ಸ್ನೇಹಲ್ ರೈ ಅವರು ಇಷ್ಕ್ ಕಾ ರಂಗ್ ಸಫೇದ್, ಜನ್ಮೋ ಕಾ ಬಂಧನ್, ಇಚ್ಚಪ್ಯಾರಿ ನಾಗಿನ್, ಪರ್ಫೆಕ್ಟ್ ಪತಿ ಹಾಗೂ ವಿಶ್ ಸೀರಿಯಲ್ಗಳಲ್ಲಿ ಅಭಿನಯಿಸಿದ್ದಾರೆ. ಹಾಗೂ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಲ್ಲದೇ, ಅವರೇ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯನ್ನೂ ನಡೆಸುತ್ತಿದ್ದಾರೆ.