ಮುಂಬೈ,ಮೇ23(DaijiworldNews/KH):ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಹಾಗೂ ಬೊಮ್ಮರಿಲ್ಲು ಖ್ಯಾತಿಯ ನಟ ಸಿದ್ಧಾರ್ಥ್ ತಮ್ಮ ರಿಲೇಷನ್ಶಿಪ್ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ . ಹಲವಾರು ಸಲ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಇವರ ಡೇಟಿಂಗ್ ವಿಚಾರವೂ ಸೋಷಿಯಲ್ ಮೀಡಿಯಾದಲ್ಲಿ ಕೂಡ ವೈರಲ್ ಆಗಿದೆ.
ಅನೇಕ ಕಾರ್ಯಕ್ರಮಗಳಲ್ಲಿ ಜಂಟಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಇವರಿಬ್ಬರು ಮಾಧ್ಯಮದ ಮುಂದೆ ಬಂದಾಗಲ್ಲೇಲ್ಲ ಡೇಟಿಂಗ್ ವಿಚಾರವನ್ನು ಕೇಳಲಾಗುತ್ತದೆ ಎಂಬ ವಿಚಾರಕ್ಕೆ ಅವರು ಕೂಡ ಜಾಣ್ಮೆಯಿಂದಲೂ ಉತ್ತರಿಸುತ್ತಾರೆ.
ಕೆಲವು ತಿಂಗಳ ಹಿಂದೆ ಇಬ್ಬರೂ ಕೂಡಾ ಇನ್ಸ್ಟಾಗ್ರಾಮ್ನಲ್ಲಿ ಟಮ್ ಟಮ್ ಹಾಡಿಗೆ ರೀಲ್ಸ್ ಮಾಡಿದ್ದರು. ಅದು ವೈರಲ್ ಸಿಕ್ಕಾ ಪಟ್ಟೆ ವೈರಲ್ ಆಗಿತ್ತು. ಇದೀಗ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅದಿತಿ ರಾವ್ ಹೈದರಿ ಅವರಿಗೆ ಡೇಟಿಂಗ್ ಕುರಿತಾಗಿ ಪ್ರಶ್ನೆ ಮಾಡಿದಾಗ, ನಟಿ ನಾಚಿಗೆ ಪಟ್ಟು ಕೈ ಸನ್ನೆ ಮಾಡುವ ಮೂಲಕ ಪರೋಕ್ಷವಾಗಿ ಒಪ್ಪಿಕೊಂಡರು.
ಇವರಿಬ್ಬರು ’ಮಹಾ ಸಮುದ್ರಂ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು ಆದರೆ ಇದು ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಲಿಲ್ಲ.ಈ ಚಿತ್ರದ ಸೆಟ್ನಲ್ಲಿ ಇಬ್ಬರಿಗೂ ಪ್ರೀತಿಯಾಗಿರಬಹುದು ಎನ್ನಲಾಗುತ್ತಿದೆ. ಮುಂಬೈ ರೆಸ್ಟೋರೆಂಟ್ನಲ್ಲಿ ಸಾಕಷ್ಟು ಬಾರಿ ಈ ಜೋಡಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಇದೆ.
ಅದಿತಿ ನಟನೆಯ `ತಾಜ್’ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅದಿತಿಗೆ ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ ವಿಷಯದ ಬಗ್ಗೆ ಕೇಳಿದ್ದಾಗ ಊಟದ ನೆಪ ಹೇಳುವ ಮೂಲಕ ನಟಿ ಜಾರಿಕೊಂಡಿದ್ದರು.