ಮುಂಬೈ,ಮೇ19(DaijiworldNews/KH):ಬಾಲಿವುಡ್ ನಟಿ ಐಶ್ವರ್ಯ ರೈ 76ನೇ ಕಾನ್ ಫಿಲ್ಮ್ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ವಿನೂತನ ರೀತಿಯ ಗೌನ್ ಧರಿಸಿ ಮನಸೆಳೆದಿದ್ದಾರೆ. ಆದರೆ ಐಶ್ವರ್ಯ ರೈ ಹೊಸ ಫ್ಯಾಶನ್ ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೇ, ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
ಸೋಫಿ ಕೌಚರ್ ಕಲೆಕ್ಷನ್ನ ಸಿಲ್ವರ್ ಕಲರ್ ಗೌನ್ಲ್ಲಿ ಐಶ್ವರ್ಯ ರೈ ಆಗಮಿಸಿದ್ದಾರೆ. ಅರ್ಧ ದೇಹ ಸುತ್ತಿಕೊಂಡಂತ ದೊಡ್ಡ ಕುಲಾಯಿ, ಹಿಂದೆ ಉದ್ದ ಟ್ರೇಲ್ ಇರುವಂತಹ ಗೌನ್ ಗಮನ ಸೆಳೆಯುತ್ತಿದೆ.
ಇನ್ನು ಸಿಂಪಲ್ ಮೇಕಪ್ ಹಾಗೂ ಕೆಂಪು ಬಣ್ಣದ ಲಿಪ್ಸ್ಟಿಕ್ನಲ್ಲಿ ಮೋಡಿ ಮಾಡಿದ್ದು, ಮಗಳು ಆರಾಧ್ಯ ಕೂಡ ಅಮ್ಮನ ಜೊತೆ ಕಾನ್ ಸಿನಿ ಉತ್ಸವಕ್ಕೆ ಆಗಮಿಸಿದ್ದಾಳೆ.
ಪ್ರತಿ ವರ್ಷ ಐಶ್ವರ್ಯ ರೈ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿ ಆಗುತ್ತಾರೆ. ತಮ್ಮ ವಿಭಿನ್ನ ಲುಕ್ನಿಂದ ಸದ್ದು ಮಾಡುತ್ತಾರೆ. 21ನೇ ಬಾರಿಗೆ ಐಶ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. 2002ರಲ್ಲಿ ಮೊದಲ ಬಾರಿಗೆ 'ದೇವದಾಸ್' ಚಿತ್ರದ ಸಹನಟ ಶಾರುಕ್ ಖಾನ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಐಶ್ ಹೆಜ್ಜೆ ಹಾಕಿದ್ದರು. ಅಲ್ಲಿಂದ ಮುಂದೆ ಪ್ರತಿ ವರ್ಷವೂ ಮಾಜಿ ವಿಶ್ವ ಸುಂದರಿ ಕಾನ್ ಉತ್ಸವಕ್ಕೆ ಹಾಜರಾಗುತ್ತಿದ್ದಾರೆ.
ಸದ್ಯ ಐಶ್ವರ್ಯ ರೈ ರೆಡ್ ಕಾರ್ಪೆಟ್ ಲುಕ್ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳಂತೂ ಐಶ್ ರೆಡ್ ಕಾರ್ಪೆಟ್ ಲುಕ್ ನೋಡಿ ಫಿದಾ ಆಗಿದ್ದಾರೆ. ಕೆಲವರಂತೂ ಐಶ್ವರ್ಯ ರೈಯನ್ನು ಹೊಗಳುತ್ತಿದ್ರೆ, ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.