ಮುಂಬೈ,ಮೇ16(DaijiworldNews/KH):ಇತ್ತೀಚಿನ ದಿನಗಳಲ್ಲಿ ಕೃತಕವಾಗಿ ಚಿತ್ರ ತಯಾರಿಸುವುದೆಲ್ಲವು ಹೆಚ್ಚಾಗಿ ಟ್ರೆಂಡ್ ನಲ್ಲಿದ್ದು, ಅಬು ಸಾಹಿದ್ ಎಂಬ ಕಲಾವಿದನ ಕೈ ಚಳಕದಿಂದ ಅನೇಕ ಪ್ರಸಿದ್ದ ವ್ಯಕ್ತಿಗಳ ವೃದ್ಧಾಪ್ಯದ ಫೋಟೋಗಳು ಮೂಡಿಬರುತ್ತಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಬು ಸಾಹಿದ್ ಅವರ ಹವ ಹೆಚ್ಚಾಗಿದೆ.
ಬಾಲಿವುಡ್ ತಾರೆಯರು ತಾವು ವಯಸ್ಸಾದಾಗ ಯಾವ ರೀತಿ ಕಾಣುತ್ತೇವೆ ಎಂಬ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಆರಂಭವಾದ ಟ್ರೆಂಡ್ ಇದೀಗ ಎಲ್ಲಾರ ಗಮನ ಸೆಳೆಯುತ್ತಿದೆ.
ಇನ್ನು ಬಾಲಿವುಡ್ ತಾರೆಯರು ವಯಸ್ಸಾದ ನಂತರ ಹೇಗೆ ಕಾಣಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇರುತ್ತದೆ. ಅಂತೆಯೇ ಇದೀಗ ಆಲ್ ಜನರೇಟರ್ ಇಮೇಜ್ ಮೂಲಕ ವಯಸ್ಸಾದ ನಂತರ ಯಾವ ರೀತಿ ಕಾಣಿಸಿಕೊಳ್ಳುತ್ತೇವೆ ಎನ್ನುವಂತದನ್ನು ನೋಡಬಹುದಾಗಿದೆ.
ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಆಲಿಯಾ ಭಟ್, ಅನುಷ್ಕಾ ಶರ್ಮ, ಪ್ರಿಯಾಂಕ ಚೋಪ್ರಾ, ಶ್ರದ್ಧಾ ಕಪೂರ್, ಕೃತಿ ಸೋನನ್, ಐಶ್ವರ್ಯ ರೈ ಬಚ್ಚನ್ ಅವರ ಚಿತ್ರ ಅಬು ಸಾಹಿದ್ ಎಂಬ ಕಲಾವಿದನ ಕೈ ಚಳಕದಿಂದ ಆಲ್ ಜನರೇಟರ್ ಇಮೇಜ್ ನಲ್ಲಿ ಮೂಡಿಬಂದಿದ್ದು, ಇದೀಗ ಬಾಲಿವುಡ್ ಸುಂದರಿಯರ ವೃದ್ಧಾಪ್ಯದ ಚಿತ್ರಗಳು ಎಲ್ಲಾ ಕಡೆ ವೈರಲ್ ಆಗುತ್ತಿದೆ.