ಮುಂಬೈ,ಮೇ12(Daijiworld News/KH): ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡು ವಿವಾದಕ್ಕೆ ಗುರಿಯಾಗಿತ್ತು. ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಬಲಪಂಥೀಯ ಚಿಂತಕರು ಆಗ್ರಹಿಸಿದ್ದರು. ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿರೋದು ವಿವಾದಕ್ಕೆ ಕಾರಣವಾಗಿತ್ತು.ಇದರೊಂದಿಗೆ ೨೦೨೦ ರಲ್ಲಿ ದೀಪಿಕಾ ಜೆಎನ್ಯು ಕ್ಯಾಂಪಸ್ನಲ್ಲಿ ನಡೆದ ಪ್ರತಿಭಟನೆಯಲ್ಲಿಯೂ ಪಾಲ್ಗೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಇತ್ತೀಚೆಗೆ, ಮ್ಯಾಗಜೀನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಎರಡು ವಿವಾದಗಳ ಬಗ್ಗೆ ದೀಪಿಕಾಗೆ ಪ್ರಶ್ನೆ ಕೇಳಿದಾಗ ಆ ಸಮಯದಲ್ಲಿ ತಾನು ಕೆಲಸದಲ್ಲಿ ನಿರತನಾಗಿದ್ದೆ ಎಂದು ಪ್ರತಿಪಾದಿಸಿದ ದೀಪಿಕಾ, 'ನಾನು ಅದರ ಬಗ್ಗೆ ಏನಾದರೂ ಭಾವಿಸಬೇಕೇ ಎಂದು ನನಗೆ ತಿಳಿದಿಲ್ಲ. ಆದರೆ ಸತ್ಯವೆಂದರೆ, ವಿವಾದದ ನನಗೆ ಅದರ ಬಗ್ಗೆ ಏನೂ ಅನಿಸುವುದಿಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ