ಮುಂಬೈ,ಮೇ8 (Daijiworld News/KH):ಸ್ಟೈಲಿಶ್ ಅವಾರ್ಡ್ಸ್ನ ರೆಡ್ ಕಾರ್ಪೆಟ್ ಕಾರ್ಯಕ್ರಮ ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ನಲ್ಲಿ ಕಳೆದ ರಾತ್ರಿ ನಡೆದಿದ್ದು, ಬಾಲಿವುಡ್ನ ಹೆಸರಾಂತ ನಟ ನಟಿಯರು ಕಲರ್ ಫುಲ್ ಆಗಿ ಮಿಂಚುತ್ತಿದ್ದರು.
ಸುಶ್ಮಿತಾ ಸೇನ್, ಜಾನ್ವಿ ಕಪೂರ್, ಅನನ್ಯಾ ಪಾಂಡೆ, ಆಯುಷ್ಮಾನ್ ಖುರಾನಾ, ರಿಚಾ ಚಡ್ಡಾ, ಪಿವಿ ಸಿಂಧು, ಶಿಲ್ಪಾ ಶೆಟ್ಟಿ, ಕೃತಿ ಸನನ್, ಅಕ್ಷಯ್ ಕುಮಾರ್, ರವೀನಾ ಟಂಡನ್ ಸೇರಿದಂತೆ ಸೆಲೆಬ್ರೆಟಿಗಳ ದಂಡೆ ಭಾಗವಹಿಸಿತ್ತು.
ಪ್ರಶಸ್ತಿ ಸಮಾರಂಭದಲ್ಲಿ ಸುಶ್ಮಿತಾ ಸೇನ್ ಸಿಜ್ಲಿಂಗ್ ರಾಯಲ್ ಬ್ಲೂ ವೆಲ್ವೆಟ್ ಪ್ಯಾಂಟ್ಸೂಟ್ನಲ್ಲಿ ಕಾಣಿಸಿಕೊಂಡರೆ, ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಕಪ್ಪು ಬಟ್ಟೆಗಳಲ್ಲಿ ಮಿಂಚಿದ್ದು, ಅನನ್ಯಾ ಪಾಂಡೆ ಸಂಪೂರ್ಣ ಗುಲಾಬಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನು ಸೆಳೆದಿದ್ದು, ಅವರೆಲ್ಲರ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.