ಮುಂಬೈ,ಮೇ7(DaijiworldNews/KH):ಇತ್ತೀಚಿನ ದಿನಗಳಲ್ಲಿ ಸುದ್ದಿ ಆಗುತ್ತಿರುವ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರು ಮದುವೆಯಾಗಿ ಒಂದೂವರೆ ವರ್ಷ ಕಳೆದರು, ಪದೇ ಪದೇ ಪ್ರೆಗೆನ್ಸಿ ವಿಷಯದಲ್ಲಿ ಸುದ್ದಿಯಾಗುತಿರುವ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಇದೀಗ ಮಗು ಮಾಡಿಕೊಳ್ಳುವ ಬಗ್ಗೆ ಕತ್ರಿನಾ ಸ್ಪಷ್ಟನೆ ನೀಡಿದ್ದಾರೆ.
ಮದುವೆಯ ಬಳಿಕ ಕತ್ರಿನಾ ಗರ್ಭಿಣಿ ಎನ್ನುವ ಸುದ್ದಿ ಅನೇಕ ಬಾರಿ ವೈರಲ್ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಕತ್ರಿನಾ ಎಲ್ಲೂ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.ಹೀಗಾಗಿ ಕತ್ರಿನಾ ಪ್ರೆಗ್ನೆಂಟ್ ಎಂದು ಅಭಿಮಾನಿಗಳು ಊಹಿಸಿದ್ದಾರೆ.
ವಿಕ್ಕಿ ಹಾಗೂ ಕತ್ರಿನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಸದ್ಯ ‘ಜೀ ಲೇ ಜರಾ’ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟಿ ಕತ್ರಿನಾ ಈ ಸಿನಿಮಾದ ಬಳಿಕ ಕತ್ರಿನಾ ಕೈಫ್ ಮಗುವಿನ ಬಗ್ಗೆ ಪ್ಲಾನ್ ಮಾಡಲಿದ್ದಾರೆ ಎನ್ನಲಾಗಿದೆ.
ಸದ್ಯ ವಿಜಯ್ ಸೇತುಪತಿ ಮತ್ತು ಫರ್ಹಾನ್ ಅಖ್ತರ್ ಜೊತೆ ಸಿನಿಮಾ ಮಾಡುವುದರ ಮೂಲಕ ಬ್ಯುಸಿಯಾದ ಈ ನಟಿ ಸದ್ಯಕ್ಕೆ ಮಗು ಮಾಡಿಕೊಳ್ಳುವ ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ.