ಹೈದರಾಬಾದ್,ಮೇ5(Daijiworld News/KH):ಮೆಗಾಸ್ಟಾರ್ ಚಿರಂಜೀವಿ ಮನೆ ಮಗಳು ನಿಹಾರಿಕಾ ಕೊನಿಡೆಲಾ ಅವರು ಎಲ್ಲೂ ಸುದ್ದಿಯಲ್ಲಿರಲಿಲ್ಲ ಆದರೆ ಇತ್ತೀಚೆಗೆ ಅವರ ವೈಯಕ್ತಿಕ ಜೀವನ ಸುದ್ದಿಯಲ್ಲಿದ್ದಾರೆ.
ನಟ ಚಿರಂಜೀವಿ ಮಗಳು ಶ್ರೀಜಾ ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದ ಬಳಿಕ ಮನೆ ಮಗಳು ನಿಹಾರಿಕಾ ವೈವಾಹಿಕ ಬದುಕು ಕೂಡ ಏರುಪೇರಾಗಿದೆ. ಡಿವೋರ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ನಟಿ ನಿಹಾರಿಕಾ 'ಬದುಕಲು ಬಿಡಿ' ಎಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಈಗಾಗಲೇ ಚರ್ಚೆಗೊಳ್ಳಗಾಗಿದೆ.
ಇನ್ನು ನಟಿ ನಿಹಾರಿಕಾ ಹಾಗೂ ಉದ್ಯಮಿ ಚೈತನ್ಯ ಇವರಿಬ್ಬರು ಪರಸ್ಪರ ಪ್ರೀತಿಸಿ 2020ರಲ್ಲಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.
ಕೆಲ ತಿಂಗಳಿಂದ ಡಿವೋರ್ಸ್ ವದಂತಿ ಕೇಳಿ ಬರುತ್ತಿದ್ದು, ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೇ ಇದ್ದರೂ ಈಗ ಹೊಸ ಪೋಸ್ಟ್ನಿಂದ ನಟಿ ಸದ್ದು ಮಾಡ್ತಿದ್ದಾರೆ.
ನಿಹಾರಿಕಾ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೊಂದನ್ನು ಶೇರ್ ಮಾಡಿ ಒಂದಷ್ಟು ಅಡಿಬರಹ ಹೀಗೆ ಬರೆದಿದ್ದುಕೊಂಡಿದ್ದಾರೆ, ನಿಮ್ಮ ಎನರ್ಜಿ ಸೇವ್ ಮಾಡಿ, ನೀವು ಸಮರ್ಥರು, ನಿಮ್ಮ ಬಗ್ಗೆ ನೀವು ದಯೆ ತೋರಿ, ಯೋಚಿಸುವುದಕ್ಕಿಂತ ನೀವು ಬಲಶಾಲಿ, ನಿಮ್ಮ ನಿದ್ರೆಗೆ ಆದ್ಯತೆ ನೀಡಿ, ಹೆಚ್ಚು ನೀರನ್ನು ಕುಡಿಯಿರಿ, ಬದುಕಿ ಮತ್ತು ಇತರರನ್ನು ಬದುಕಲು ಬಿಡಿ ಎನ್ನುವ ವಿಚಾರವನ್ನ ಪೋಸ್ಟ್ ಮಾಡಿದ್ದಾರೆ.
ನಿಹಾರಿಕಾ ಹಾಗೂ ಚೈತನ್ಯ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದು, ಇದೀಗ ಮದುವೆಯ ಫೋಟೋಸ್ ಗಳನ್ನ ಇಬ್ಬರೂ ಡಿಲೀಟ್ ಮಾಡಿದ್ದಾರೆ. ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.