ಮುಂಬೈ,ಮಾ25(AZM):ಆಸಿಡ್ ದಾಳಿಗೊಳಗಾದ ಮಹಿಳೆಯ ಕಥೆ ಹೇಳುವ ಚಪಾಕ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಫೋಟೋ ನೋಡಿ ಅಭಿಮಾನಿಗಳಿಗೆ ಶಾಕ್ ಆಗಿದೆ.
ಮೇಘನಾ ಗುಲ್ಜಾರ್ ನಿರ್ದೇಶನದ ಚಪಾಕ್ ಚಿತ್ರದ ಶೂಟಿಂಗ್ ಇಂದಿನಿಂದ ಶುರುವಾಗಿದ್ದು, ಮುಂದಿನ ವರ್ಷ ಜನವರಿಯಲ್ಲಿ ಚಿತ್ರ ತೆರೆಮೇಲೆ ಬರಲಿದೆ. ಚಿತ್ರದಲ್ಲಿ ಆಸಿಡ್ ದಾಳಿಗೊಳಗಾದ ಮಹಿಳೆ ಲಕ್ಷ್ಮೀಯವರ ಪಾತ್ರಕ್ಕೆ ದೀಪಿಕ ಪಡುಕೋಣೆ ಬಣ್ಣ ಹಚ್ಚುತ್ತಿದ್ದು, ಲಕ್ಷ್ಮೀ ತಮ್ಮ ಜೀವನದಲ್ಲಿ ಅನುಭವಿಸಿದ ನೋವುಗಳನ್ನು ತೆರೆಯ ಮೇಲೆ ತೋರಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಅನ್ನು ದೀಪಿಕಾ ಟ್ವಿಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ. ದೀಪಿಕಾರ ಈ ಲುಕ್ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಮೇಕಪ್ ಪವರ್ ಎಷ್ಟಿದೆ ಅಂದರೆ ದೀಪಿಕಾರ ಮುಖದ ಸೌಂದರ್ಯವೇ ಬದಲಾಗಿ ಹೋಗಿದೆ.
ದೀಪಿಕಾ ಈ ಫೋಟೋವನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.ಹಾಗೂ ಸಾಕಷ್ಠು ಶುಭ ಹಾರೈಕೆಗಳ ಸಂದೇಶಗಳು ಕೂಡಾ ಬಂದಿದೆ.