ಮುಂಬೈ, ಏ 18 (DaijiworldNews/HR): ಬಾಲಿವುಡ್ ಬ್ಯೂಟಿ ಇಲಿಯಾನಾ ಡಿಕ್ರೂಜ್ ಅವರು ಮದುವೆಗೂ ಮುನ್ನ ನಟಿ ಗರ್ಭಿಣಿಯಾಗಿರುವ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದು, ಇದೀಗ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ನಟಿ ಇಲಿಯಾನಾ ಮಗುವಿಗೆ ಹಾಕುವ ಬಟ್ಟೆಯೊಂದನ್ನು ಹಾಕಿ ಅದರಲ್ಲಿ 'ಅಡ್ವೆಂಟರ್ ಬೀಗೆನ್ಸ್' ಎಂದು ಬರೆದುಕೊಂಡಿದ್ದು, ಇನ್ನೊಂದು ಫೋಟೋದಲ್ಲಿ ಕುತ್ತಿಗೆಗೆ ಹಾಕಿರುವ ಪೆಂಡಿಂಟ್ ವೊಂದರಲ್ಲಿ 'ಅಮ್ಮಾ' (Mama) ಎಂದು ಬರೆದಿದೆ.
ಇನ್ನು ಪೋಸ್ಟ್ ನೋಡಿದ ಅಭಿಮಾನಿಗಳು ಇನ್ನೂ ಇಲಿಯಾನಾ ಮದುವೆಯಾಗಿಲ್ಲ. ಈ ಹಿಂದೆ ಇಲಿಯಾನಾ ಆಸ್ಟ್ರೇಲಿಯದ ಛಾಯಾಗ್ರಾಹಕ, ಆಂಡ್ರ್ಯೂ ನೀಬೋನ್ ಅವರೊಂದಿಗೆ ಡೇಟಿಂಗ್ ನಲ್ಲಿದ್ದು ಬಳಿಕ 2019 ರಲ್ಲಿ ಇಬ್ಬರು ದೂರವಾದರು.