ಮುಂಬೈ, ಏ 16 (DaijiworldNews/HR): ಹುಡುಗಿ ಒಂದ್ ಸಲ ಐ ಲವ್ ಯೂ ಅಂದರೆ ನಿಮ್ಮ ಜೀವನ ಮುಗೀತು ಅಂತ ಅರ್ಥ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದು, ಇದೀಗ ಈ ಮಾತು ಸಖತ್ ವೈರಲ್ ಕೂಡ ಆಗಿದೆ.
ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಹೊಸದೆನಲ್ಲ. ಸಲ್ಮಾನ್ ಈವರೆಗೂ ಮದುವೆ ಆಗದೇ ಇರುವುದಕ್ಕೆ ಇದೊಂದು ಕಾರಣ ಎಂದು ಹೇಳಲಾಗುತ್ತಿದೆ.
ಇನ್ನು ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿರುವ ಸಲ್ಮಾನ್, ತಮಗೆ ಕೈ ಕೊಟ್ಟ ಸಂಗತಿಯನ್ನು ಬೇರೆ ರೂಪದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಹುಡುಗಿ ಒಂದ್ ಸಲ ಐ ಲವ್ ಯೂ ಅಂದರೆ, ನಿಮ್ಮ ಜೀವನ ಮುಗೀತು ಅಂತ ಅರ್ಥ ಎಂದು ಹೇಳಿದ್ದಾರೆ.
ಇದೀಗ ಈ ಮಾತು ಸಖತ್ ವೈರಲ್ ಆಗುತ್ತಿದ್ದು, ಇದೊಂದು ವಿವಾದಾತ್ಮಕ ಮಾತು ಎಂದು ಚರ್ಚೆ ನಡೆಯುತ್ತಿದೆ.