ಮುಂಬೈ, ಏ 13 (DaijiworldNews/HR): ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಮದುವೆ ಆಗದೇ ಇದ್ದರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಇದೀಗ ಈ ಜೋಡಿಮದುವೆ ಆಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ನಾನು ಪ್ರಿ ಹನಿಮೂನ್ ಹಂತ ತಲುಪಿದ್ದೇವೆ. ಮದುವೆ ಅನ್ನೋದು ವೈಯಕ್ತಿಕವಾದದ್ದು. ನಮಗೂ ಮದುವೆ ಆಗಬೇಕು ಅಂತ ಅನಿಸಿದೆ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಲೈಕಾ ಹೇಳಿದ್ದರು.
ಇದೀಗ ಇಬ್ಬರೂ ವಿಮಾನ ಏರಿದ್ದು, ಹಾಗಾಗಿ ಮದುವೆ ಶಾಪಿಂಗ್ ಮಾಡುವುದಕ್ಕಾಗಿ ಒಟ್ಟಾಗಿ ಹೋಗಿದ್ದಾರಾ ಎನ್ನುವ ಅನುಮಾನ ಮೂಡಿದೆ.