ಮಂಗಳೂರು, ಏ 11(DaijiworldNews/MS): ಬರೆಟ್ಟೊ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬಂದಿರುವ ಜಾನ್ ಸುನಿಲ್ ನಿರ್ಮಾಣದ , ಮೆಲ್ವಿನ್ ಎಲ್ಪೆಲ್ ನಿರ್ದೇಶನದ "ವೊಡ್ತಾಂತ್ಲೆ ಫುಲ್ " ಎಂಬ ಕೊಂಕಣಿ ಚಿತ್ರ ಇದೇ ಬರುವ ಏಪ್ರಿಲ್ 14 ರಂದು ಮಂಗಳೂರಿನ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ತೆರೆಕಾಣಲಿದೆ.
ಈ ಚಿತ್ರವು ಮಂಗಳೂರು ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಈ ಚಿತ್ರದಲ್ಲಿ ಆಸ್ಕರ್ ಫರ್ನಾಂಡೀಸ್, ಸುನೀತಾ ಮರಿಯ, ಲೀಶಾ ಕರ್ಡೋಜ, ನೋರ್ಬರ್ಟ್ ಜಾನ್ , ಸ್ಟಾನಿ ಅಲ್ವರಿಸ್, ಜೀವನ್ ವಾಸ್, ಸಂತೋಷ್ ಮುಲ್ಲೇರಿಯ , ಫಾ| ಸಿರಿಲ್ ಲೋಬೋ , ಸಿ| ಜೆಸಿಂತಾ ಬರೆಟ್ಟೋ , ಹ್ಯಾರಿ ಪ್ರವೀಣ್ ಕೊರೇಯ ಹಾಗೂ ಇತರರು ನಟಿಸಿದ್ದು
ಈ ಚಿತ್ರದ ಕಥೆ ಮತ್ತು ಛಾಯಾಗ್ರಹಣ ದಿವಂಗತ ವಿಜಯ್ ಎಸ್. ಮತ್ತು ಡೆನೇಲ್ ಜೇಸನ್ ಮಾಡಿದ್ದು , ಚಿತ್ರಕಥೆ - ಸಹ ನಿರ್ದೇಶನ - ನೋರ್ಬರ್ಟ್ ಜಾನ್ ಹಾಗೂ ಹಾಗೂ ಸಂಕಲನ ರಘುನಾಥ್ ಎಲ್ ಹಾಗೂ ಸಹ ಸಂಕಲನ ಅರ್ವಿನ್ ಲೋಬೋ ಅವರು ಮಾಡಿದ್ದಾರೆ.ಚಿತ್ರದ ಡಬ್ಬಿಂಗ್ ಮತ್ತು ಮಿಕ್ಸಿಂಗ್ ಅನ್ನು ಮಂಗಳೂರಿನ ದಾಯ್ಜಿವರ್ಲ್ಡ್ ಆಡಿಯೋ ವಿಷುಯಲ್ ಪ್ರೈವೇಟ್ ಲಿಮಿಟೆಡ್ನಲ್ಲಿ ಮಾಡಲಾಗಿದೆ.
ಈ ಚಿತ್ರಕ್ಕೆ ಅರ್ಜುನ್ ಲೂಯಿಸ್ ಅವರು ಸಾಹಿತ್ಯ ಬರೆದಿದ್ದು, ಡೊಲ್ವಿನ್ ಕೊಳಲಾಗಿರಿ ಅವರು ಸಂಗೀತ ನೀಡಿದ್ದಾರೆ.ಈ ಚಿತ್ರದ ಆಡಿಯೋ ರೈಟ್ಸ್ ಅನ್ನು ಜಸ್ಟ್ ರೋಲ್ ಫಿಲಂಸ್ ಯೂಟ್ಯೂಬ್ ಚಾನೆಲ್ ನವರು ಪಡೆದುಕೊಂಡಿದ್ದಾರೆ.
ಈ ಚಿತ್ರವು ಕೌಟುಂಬಿಕ ಹಾಗೂ ಸಾಮಾಜಿಕ ಅರಿವು ಮೂಡಿಸುವ ಚಿತ್ರವಾಗಿದೆ. ಶಾಲೆಯ ಮಕ್ಕಳ ಮೇಲೆ ಬೀಳುವ ಶಿಕ್ಷಣದ ಒತ್ತಡ , ಹೆತ್ತವರ ನಿರ್ಲಕ್ಷಣ , ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ತಪ್ಪು ಸಂದೇಶಗಳಿಂದ ಉಂಟಾಗುವ ಪರಿಣಾಮ ಈ ಚಿತ್ರದ ಸಾರವಾಗಿದೆ.