ಹೈದರಾಬಾದ್, ಏ 8 (DaijiworldNews/HR): ಖ್ಯಾತ ನಟಿ ನಯನತಾರಾ ಅವರು ಇದೇ ಮೊದಲ ಬಾರಿಗೆ ಅಭಿಮಾನಿಯ ವಿರುದ್ಧ ಗರಂ ಆಗಿದ್ದು, ಇದೀಗ ಈ ಸುದ್ದಿ ಸಖತ್ ಸದ್ದು ಮಾಡುತ್ತಿದೆ.
ಪತಿ ವಿಘ್ನೇಶ್ ಶಿವನ್ ಜೊತೆ ಇತ್ತೀಚೆಗಷ್ಟೇ ನಯನತಾರಾ ಕುಂಭಕೋಣಂ ಬಳಿಯ ಕಾಮಾಕ್ಷಿ ಅಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಶಾಂತವಾಗಿ ಇರುವಂತೆ ಎಷ್ಟೇ ಮನವಿ ಮಾಡಿದರೂ ಅಭಿಮಾನಿಗಳು ಕೇಳದಿದ್ದಾಗ ನಯನತಾರಾ ಗರಂ ಆಗಿದ್ದಾರೆ.
ಸಾಲಾಗಿ ಬನ್ನಿ ಎಲ್ಲರಿಗೂ ಸೆಲ್ಫಿ ಕೊಡುವೆ ಎಂದು ನಯನತಾರಾ ಮನವಿ ಮಾಡಿಕೊಂಡರೂ ಅಭಿಮಾನಿಗಳು ಕೇಳಿಲ್ಲ. ಹಾಗಾಗಿ ತರಾತುರಿಯಲ್ಲಿ ಪೂಜೆ ಮುಗಿಸಿ ಹೊರಟಿದ್ದಾರೆ.
ಇನ್ನು ಈ ವೇಳೆ ವಿಡಿಯೋ ಮಾಡುತ್ತಾ ಬಂದ ಅಭಿಮಾನಿಯ ವಿರುದ್ಧ ಗರಂ ಆದ ನಯನಾ ಮೊಬೈಲ್ ಒಡೆದು ಹಾಕುವುದಾಗಿ ಎಚ್ಚರಿಸಿದ್ದಾರೆ.