ಮುಂಬೈ, ಏ 05 (DaijiworldNews/MS): ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ ಈ ಜೋಡಿ ಸದ್ಯದ ಹಾಟ್ ಟಾಪಿಕ್ ಆಗಿದೆ. ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಿರುವ ಈ ಜೋಡಿ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಈ ವಾರ ಅದ್ದೂರಿ ನಿಶ್ಚಿತಾರ್ಥ ನಡೆಯಲಿದೆ. ಅದರೂ ಇವರ ಪ್ರೇಮದ ಬಗ್ಗೆ ಸಾಕಷ್ಟು ನಿಗೂಢತೆಯೇ ಉಳಿದುಕೊಂಡಿದೆ. ಯಾಕೆಂದರೆ ಇವರಿಬ್ಬರೂ ಈ ವಿಚಾರವಾಗಿ ಯಾವುದೇ ಸ್ಪಷ್ಟನೆಯನ್ನು ಕೊಟ್ಟಿಲ್ಲ.
ಪರಿಣಿತಿ ಚೋಪ್ರಾ ಜೀವನದಲ್ಲಿ ಸೆಟಲ್ ಆಗುತ್ತಿದ್ದಾರೆ. ನನಗಂತೂ ಆಕೆಯ ನಿರ್ಧಾರದ ಬಗ್ಗೆ ಖುಷಿ ಇದೆ. ಪರಿಣಿತಿ ಚೋಪ್ರಾಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದು ನಟ, ಗಾಯಕ ಹಾರ್ಡಿ ಸಂಧು ಪರಿಣಿತಿ ವಿವಾಹದ ಬಗ್ಗೆ ಹಿಂಟ್ ಕೊಟ್ಟಿದ್ದರು.
ಇತ್ತೀಚೆಗಷ್ಟೇ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ದೆಹಲಿ ಏರ್ಪೋರ್ಟ್ನಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದರು.