ಮುಂಬೈ, ಏ 04 (DaijiworldNews/HR): ಬಾಲಿವುಡ್ ನಟಿ ಶ್ವೇತಾ ತಿವಾರಿ ಪುತ್ರಿ ಪಾಲಕ್ ತಿವಾರಿ ಅವರು ಈಗ ಬಾಲಿವುಡ್ ನಲ್ಲಿ ಸಿನಿಮಾನಗಳನ್ನು ಮಾಡುತ್ತಿದ್ದು, ಇದೀಗ ನಟಿ ಪಾಲಕ್, ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಜೊತೆ ಡೇಟಿಂಗ್ ನಲ್ಲಿ ಇದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಸಂದರ್ಶನವೊಂದರಲ್ಲಿ ಇಬ್ರಾಹಿಂ ಜೊತೆಗಿನ ರಿಲೇಷನ್ಶಿಪ್ ಬಗ್ಗೆ ನಟಿ ಪಾಲಕ್ ಅವರಿಗೆ ಕೇಳಲಾಗಿದೆದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಷ್ಟೆ ಎಂದಿದ್ದಾರೆ.
ನಾನು ವೃತ್ತಿಯಲ್ಲಿ ಬ್ಯುಸಿಯಾಗಿರುವಿದರಿಂದ ಇಂತಹ ವದಂತಿಗೆಲ್ಲಾ ಕಿವಿಗೊಡುವುದಿಲ್ಲ. ಕೆಲಸದ ಮೇಲೆ ಹೆಚ್ಚು ಗಮನ ಹರಿಸುತ್ತೇನೆ. ಪ್ರೀತಿಯನ್ನು ಎಂದಿಗೂ ಲೆಕ್ಕಾಚಾರ ಮಾಡಲು ಅಥವಾ ಊಹಿಸಲು ಸಾಧ್ಯವಿಲ್ಲ ಎಂದರು.
ಈ ಹಿಂದೆ ಪಾಲಕ್- ಇಬ್ರಾಹಿಂ ಜೊತೆ ರೆಸ್ಟೋರೆಂಟ್ನಿಂದ ಹೊರ ಬರುವಾಗ ನೆಟ್ಟಿಗರು ಪೋಟೊ ಕ್ಲಿಕ್ಕಿಸಿದ್ದು, ಆ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು.