ಮುಂಬೈ, ಏ 01 (DaijiworldNews/SS): ಬಾಲಿವುಡ್ ನಲ್ಲಿರುವ ನೆಪೋಟಿಸಂ ಬಗ್ಗೆ ಹೆಚ್ಚಾಗಿ ದ್ವನಿ ಎತ್ತುವ ನಟಿ ಕಂಗನಾ ರಣಾವತ್ ವಿರುದ್ಧ ನಿರ್ದೇಶಕ ಕರಣ್ ಜೋಹರ್ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಕಂಗನಾ ಕೂಡ ಕೆಲ ದಿನಗಳ ಹಿಂದೆ ಏರ್ಪೋರ್ಟ್ನಲ್ಲಿ ಕರಣ್ ವಿರುದ್ಧ ಹೆಸರು ಹೇಳದೇ ಕಿಡಿ ಕಾರಿದ್ದರು. ಅದೇ ರೀತಿ ಕರಣ್ ಆ ಮಾತಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆಂದು ನೆಟ್ಟಿಗರು ಮಾತಾಡಿಕೊಳ್ಳುತ್ತಿದ್ದಾರೆ.
ಕರಣ್ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಏರ್ಪೋರ್ಟನಲ್ಲಿ ಸುದ್ದಿಗೋಷ್ಠಿ ನಡೆಯಬಹುದು. ಇನ್ನು ಸ್ವಲ್ಪ ದಿನ ಬಿಟ್ಟು, ಟ್ರೇಲರ್ ಲಾಂಚ್ ಪ್ರೊಗ್ರ್ಯಾಮ್ ಕೂಡ ನಡೆಯಬಹುದು. ನಾನು ಕೂಡ ಇದರ ಮೆಂಬರ್ಶಿಪ್ ತೆಗೆದುಕೊಳ್ಳುತ್ತೇನೆ. ಯಾವುದೇ ತೊಂದರೆ ಇಲ್ಲ. ರವಿಯ ಹಾಡಿಗಿಂತ ನನಗೆ ಎತ್ನಿಕ್ ಡ್ರೆಸ್ ಹಾಕಿಕೊಂಡವರ ಆಬ್ಸರ್ವೇಶನ್ ಇದೆ ಎಂದು ಹೇಳಿದ್ದಾರೆ. ಆದ್ರೆ ಕರಣ್ ಎಲ್ಲಿಯೂ ಕಂಗನಾ ರಾಣಾವತ್ ಹೆಸರು ಹೇಳಲಿಲ್ಲ.
ಕಂಗನಾ ರಾಣಾವತ್ ನೆಪೋಟಿಸಮ್ ಬಗ್ಗೆ ಮಾತನಾಡುವಾಗ ಯಾವಾಗಲೂ ಕರಣ್ ಜೋಹರ್ರನ್ನೇ ಗುರಿಯಾಗಿಸಿ ಮಾತನಾಡುತ್ತಿರುತ್ತಾರೆ. ಯಾಕಂದ್ರೆ ಅವರು ಬಾಲಿವುಡ್ ನಿರ್ದೇಶಕರ ಮಗನಾಗಿದ್ದು, ತಮಗೆ ಬೇಕಾದವರಿಗಷ್ಟೇ ಬಾಲಿವುಡ್ನಲ್ಲಿ ಆ್ಯಕ್ಟ್ ಮಾಡಲು ಅವಕಾಶ ಕೊಡುತ್ತಾರೆ. ನಟ, ನಟಿ, ನಿರ್ದೇಶಕರ ಮಕ್ಕಳಿಗಷ್ಟೇ ಅವರು ಅವಕಾಶ ಕೊಟ್ಟು, ಪಾರ್ಶಿಯಾಲಿಟಿ ಮಾಡುತ್ತಾರೆಂದು ಕಂಗನಾ ಪರೋಕ್ಷವಾಗಿ ಆರೋಪ ಮಾಡುತ್ತಿರುತ್ತಾರೆ.
ಹಾಗಾಗಿ ಕರಣ್ ಹಾಕಿರುವ ಸ್ಟೇಟಸ್ ಕಂಗನಾ ಅವರ ವಿರುದ್ಧವೇ ಆಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸುದ್ದಿಗಾರರೊಂದಿಗೆ ಏರ್ಪೋರ್ಟ್ನಲ್ಲಿ ಮಾತನಾಡಿದ್ದ ಕಂಗನಾ, ಕರಣ್ರನ್ನು ಪಾಪರಾಜಿ ಚಾಲಾಕ್ ಎಂದು ಹೇಳಿದ್ದರು. ಅಲ್ಲದೇ, ನಾನು ಫಿಲ್ಮ್ ಮಾಫಿಯಾ ಬಗ್ಗೆ ಯಾವುದೇ ಪ್ರಶ್ನೆ ಕೇಳುವುದಿಲ್ಲ. ಆದರೆ ನನ್ನ ಬಗ್ಗೆ ಯಾವುದಾದರೂ ವಿವಾದವಾದರೆ, ಅದರ ಬಗ್ಗೆ ಕೆಲವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆಂದು ಹೇಳಿದ್ದರು.