ಮುಂಬಯಿ, ಮಾ 29 (DaijiworldNews/DB): ನಟಿ ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಪುತ್ರಿ ನೈಸಾ ದೇವಗನ್ ಆಗಾಗ ಚರ್ಚೆಯಲ್ಲಿರುತ್ತಾರೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೂ, ಆಕೆಯ ಬೋಲ್ಡ್ ನೆಸ್ಗೂ ಆಕೆ ಸದಾ ಸುದ್ದಿಯಲ್ಲಿರುವ ಹುಡುಗಿ. ಇನ್ನು ಮಗಳ ಬೋಲ್ಡ್ನೆಸ್ ಬಗ್ಗೆ ಕಾಜೊಲ್ ಮುಕ್ತವಾಗಿ ಮಾತನಾಡಿದ್ದಾರೆ.
ಹೌದು. ಮಗಳು ಏನೇ ಮಾಡಿದರೂ ನಾನು ಅವಳನ್ನು ಬೆಂಬಲಿಸುತ್ತೇನೆ ಎನ್ನುವ ಮೂಲಕ ಮಗಳ ಬೋಲ್ಡ್ನೆಸ್ನ್ನು ಕಾಜೊಲ್ ಕೊಂಡಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಕಾಜೊಲ್, ಆಕೆಗೆ ಮೋಜು ಮಸ್ತಿ ಇಷ್ಟ. ಅವಳಿಗೆ ಏನು ಬೇಕೋ ಅದನ್ನು ಮಾಡುವ ಹಕ್ಕು ಅವಳಿಗಿದೆ. ನಾನು ಅದನ್ನು ಸದಾ ಬೆಂಬಲಿಸುತ್ತೇನೆ ಎಂದಿದ್ದಾರೆ.
ಇದಕ್ಕೂ ಮೊದಲು ನೈಸಾ ಬೋಲ್ಡ್ನೆಸ್, ಡ್ರೆಸ್ಸಿಂಗ್, ಫೋಟೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಟ್ರೋಲ್ಗೊಳಗಾಗುತ್ತಿದ್ದಳು. ಇದರ ಬಗ್ಗೆ ಅಜಯ್ ದೇವಗನ್ ಮಾತನಾಡುತ್ತಾ ಇದರಿಂದ ನಮಗೆ ತೊಂದರೆಯಾಗಿದೆ. ಆದರೆ ಕಾಮೆಂಟ್ ಮಾಡುವವರಿಂದ ಏನನ್ನೂ ಬದಲಾಯಿಸಲಾಗದು ಅವರು ಹಾಗೆಯೇ ಇರುತ್ತಾರೆ ಎಂದಿದ್ದರು.