ಮುಂಬೈ, ಮಾ 28 (DaijiworldNews/HR): ನಟಿ ಪ್ರಿಯಾಂಕಾ ಚೋಪ್ರಾ ವಿದೇಶದಲ್ಲಿ ನೆಲೆಸಲು ಹಾಗೂ ಬಾಲಿವುಡ್ ನಿಂದ ದೂರವಾಗಲು ಕಾರಣ ಕರಣ್ ಜೋಹಾರ್ ಎಂದು ನಟಿ ಕಂಗನಾ ರಣಾವತ್ ಹೇಳಿದ್ದು, ಇದೀಗ ಈ ಬಗ್ಗೆ ಬಿಟೌನ್ ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಈ ಕುರಿತು ಕಂಗನಾ ಸೋಷಿಯಲ್ ಮೀಡಿಯಾದಲ್ಲೇ ಬರೆದುಕೊಂಡಿದದು, ಇದೀಗ ಬಾಲಿವುಡ್ ನಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕಾ, ನಾನು ಬಾಲಿವುಡ್ ನಿಂದ ದೂರವಾಗಲು ಮತ್ತು ಅಲ್ಲಿನ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಕಾರಣ ರಾಜಕೀಯ. ಎಲ್ಲೋ ಒಂದು ಕಡೆ ನನ್ನನ್ನು ತುಳಿಯುವುದಕ್ಕೆ ಶುರು ಮಾಡಿದ್ದಾರೆ ಅನಿಸಿತು ಎಂದಿದದರು.
ಇನ್ನು ಈ ಕುರಿತಾಗಿ ಪ್ರತಿಕ್ರಿಯಿಸಿರುವ ಕಂಗನಾ, ಕರಣ್ ಜೋಹಾರ್ ನಿಮ್ಮನ್ನು ಬ್ಯಾನ್ ಮಾಡಿದ್ದರು. ಈ ಕಾರಣಕ್ಕಾಗಿಯೇ ಪ್ರಿಯಾಂಕಾ ಬಾಲಿವುಡ್ ಬಿಟ್ಟರು ಎಂದು ಬರೆದುಕೊಂಡಿದ್ದಾರೆ.