ಮುಂಬೈ, ಮಾ 24 (DaijiworldNews/MS): ಬಾಲಿವುಡ್ ನಟಿ, ಫ್ಯಾಷನ್ ಜಗತ್ತಿನಲ್ಲಿ ವಿಚಿತ್ರ ಉಡುಗೆಗಳ ಮೂಲಕವೇ ಹೆಚ್ಚು ಸುದ್ದಿ ಮಾಡುತ್ತಿರುವ ಉರ್ಫಿ ಜಾವೇದ್ ಈ ಬಾರಿ ಪ್ರೀತಿ-ಪ್ರೇಮದ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.
ಉರ್ಫಿ ಜವೇದ್ ತನ್ನ ಇನ್ ಸ್ಟಾಗ್ರಾಂ ಸ್ಟ್ರೋರಿಯಲ್ಲಿ ’ಅವನು ಒಪ್ಪಿಕೊಂಡಿದ್ದಾನೆ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದಲ್ಲದೆ ಮತ್ತೊಂದು ಚಿತ್ರದಲ್ಲಿ ವೂಹೂ..ವಿ ಡಿಡ್ ಇಟ್.! ಎಂಬ ಫೋಟೋ ಹಂಚಿಕೊಂಡಿದ್ದಾರೆ.
ಈ ಮೂಲಕ ಉರ್ಫಿ ತಮ್ಮ ಪ್ರೀತಿಯ ಬಗ್ಗೆ ಸುಳಿವು ನೀಡಿದರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಕೆಲವರು ಅಭಿನಂದನೆ ತಿಳಿಸುತ್ತಿದ್ರೆ ಇನ್ನು ಕೆಲವರು ಕೆಲವರು ಕಾಲೆಳೆಯುತ್ತಿದ್ದಾರೆ. ಉರ್ಫಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಉರ್ಫಿ ಈ ಹಿಂದೆ ಅನುಪಮಾ ಖ್ಯಾತಿಯ ಪರಾಸ್ ಕಲ್ನಾವತ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದು ಬಳಿಕ ಇಬ್ಬರ ಸಂಬಂಧ ಮುರಿದು ಬಿದ್ದಿದ್ದು ಇದೀಗ ಉರ್ಫಿ ಮತ್ತೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಯಾರು ಎಂದು ರಿವೀಲ್ ಮಾಡಿಲ್ಲ. ಅಥವಾ ಬೇರೆ ಯಾವುದೋ ವಿಚಾರವಾಗಿ ಪೋಸ್ಟ್ ಹಾಕಿದ್ದಾರಾ ಎನ್ನುವುದು ಕುತೂಹಲ ಮೂಡಿಸಿದೆ.