ಮುಂಬೈ, ಮಾ 18 (DaijiworldNews/DB): ಫ್ಯಾಶನ್ ವಿಚಾರವಾಗಿ ನಟಿ ಉರ್ಫಿ ಜಾವೇದ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ತಮ್ಮ ಚಿತ್ರ ವಿಚಿತ್ರ ವೇಷಭೂಷಣಗಳಿಂದಾಗಿ ಅವರು ಸದಾ ಸುದ್ದಿಗೆ ಆಹಾರವಾಗುತ್ತಿರುತ್ತಾರೆ.
ಇನ್ನು ಇದೇ ಉರ್ಫಿ ಜಾವೇದ್ ಬಗ್ಗೆ ಸಂದರ್ಶನವೊಂದರಲ್ಲಿ ನಟಿ ಕರೀನಾ ಕಪೂರ್ ಅವರು ರಣಬೀರ್ ಕಪೂರ್ಗೆ ಪ್ರಶ್ನೆ ಹಾಕಿದ್ದಾರೆ. ಫ್ಯಾಶನ್ ವಿಚಾರದಲ್ಲಿ ಉರ್ಫಿ ಬಗ್ಗೆ ನೀವೇನು ಹೇಳುತ್ತೀರಿ ಎಂಬುದಾಗಿ ರಣಬೀರ್ಗೆ ಕರೀನಾ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಣಬೀರ್, ಉರ್ಫಿ ಫ್ಯಾಶನ್ಗೆ ನಾನು ಅಭಿಮಾನಿಯಂತೂ ಖಂಡಿತಾ ಅಲ್ಲ. ಹಾಗೆ ಹೇಳುವುದಾದರೆ ಅವಳದ್ದು ಫ್ಯಾಶನ್ ಅಲ್ಲ, ಅದೊಂದು ಕೆಟ್ಟ ಅಭಿರುಚಿ ಎಂದು ಖಡಕ್ ರಿಯಾಕ್ಷನ್ ನೀಡಿದ್ದಾರೆ.
ಇನ್ನು ರಣಬೀರ್ ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಈವರೆಗೆ ಉರ್ಫಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಫ್ಯಾಶನ್ ಕುರಿತು ಮಾತನಾಡುವವರಿಗೆಲ್ಲ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಿರುವ ಉರ್ಫಿ ರಣಬೀರ್ಗೂ ಹಾಗೇ ಮಾಡುತ್ತಾರಾ ಅಥವಾ ಸುಮ್ಮನಿರುತ್ತಾರಾ ಕಾದು ನೋಡಬೇಕಿದೆ.