ಮುಂಬೈ, ಮಾ 15 (DaijiworldNews/DB): ನಟಿ ಅನನ್ಯಾ ಪಾಂಡೆ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಇದಕ್ಕೆ ಕಾರಣ ಅವರು ಸಂಬಂಧಿಯ ಮದುವೆ ಕಾರ್ಯಕ್ರಮದಲ್ಲಿ ಧಮ್ ಹೊಡೆಯುತ್ತಿದ್ದುದು.
ಹೌದು. ಸಂಬಂಧಿಯೊಬ್ಬರ ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನೆಂಟರಿಷ್ಟರೆಲ್ಲ ಬ್ಯುಸಿಯಾಗಿದ್ದರೆ, ನಟಿ ಅನನ್ಯಾ ಪಾಂಡೆ ಮಾತ್ರ ರಹಸ್ಯವಾಗಿ ಸಿಗರೇಟ್ ಸೇದುತ್ತಾ ನಿಂತಿದ್ದರು. ಆದರೆ ಇದನ್ನು ಯಾರೋ ಒಬ್ಬರು ಫೋಟೋ ತೆಗೆದು ವೈರಲ್ ಮಾಡಿದ್ದಾರೆ. ಅಲ್ಲದೆ ಅಲ್ಲಿದ್ದವರಿಂದ ಸರಿಯಾಗಿ ಬೈಸಿಕೊಂಡಿದ್ದರು.
ಇನ್ನು ಫೋಟೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಅನನ್ಯಾ ಪಾಂಡೆಯನ್ನು ಸಿಕ್ಕಾಪಟ್ಟೆ ಕಾಲೆಳೆದಿದ್ದಾರೆ. ಆಕೆ ಉತ್ತಮ ನಟಿಯಲ್ಲ ಎಂಬುದು ಗೊತ್ತಿತ್ತು, ಆದರೆ ಸ್ಮೋಕರ್ ಎಂಬುದು ತಿಳಿದಿರಲಿಲ್ಲ ಎಂದು ಒಬ್ಬರು ಹೇಳಿದರೆ, ಎಲ್ಲರೂ ಮದುವೆಯಲ್ಲಿ ಬ್ಯಸಿ, ಅನನ್ಯಾ ಸಿಗರೇಟ್ ಸೇದುವುದರಲ್ಲಿ ಬ್ಯುಸಿ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. ಇನ್ನು ನೋಡೋಕೆ ಸೈಲೆಂಟ್ ಇರೋ ಇವ್ರು ಸಿಗರೇಟ್ ಎಡಿಕ್ಟ್ ಎಂಬುದು ಗೊತ್ತೇ ಇರಲಿಲ್ಲ. ಹೇಗೂ ಸ್ಟ್ರಗಲ್ ಮಾಡಿ ಬಂದವರಲ್ವಾ ಎಂಬುದಾಗಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.