ಮುಂಬೈ, ಮಾ 14 (DaijiworldNews/HR): ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಿ ಆಸ್ಕರ್ 2023 ಅವಾರ್ಡ್ನಲ್ಲಿ ನಿರೂಪಣೆ ಮಾಡಿ ಮಿಂಚಿದ್ದು, ಇದೀಗ ಅವರ ಕಿವಿಯ ಹಿಂದೆ ಹಾಕಿಸಿಕೊಂಡಿರುವ ಟ್ಯಾಟೂ ಸಖತ್ ಸದ್ದು ಮಾಡಿತ್ತಿದೆ.
ಆಸ್ಕರ್ 2023 ಅವಾರ್ಡ್ನಲ್ಲಿ ದೀಪಿಕಾ ಕಪ್ಪು ಗೌನ್ ಜೊತೆಗೆ ಕೈಯಲ್ಲಿ ಕಪ್ಪು ಬಣ್ಣದ ಗ್ಲೋಸ್ಗಳನ್ನು ಧರಿಸಿದ್ದರು. ಇದರೊಂದಿಗೆ, ಕೂದಲನ್ನು ಬನ್ ಸ್ಟೈಲ್ನಲ್ಲಿ ಸಿಂಗರಿಸಿದ್ದರು.
ಇನ್ನು ದೀಪಿಕಾ ಕಿವಿಯ ಹಿಂದೆ ಹಾಕಿಕೊಂಡಿದ್ದ ಟ್ಯಾಟೂ ಮೇಲೆ ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದು, ದೀಪಿಕಾ ಕಿವಿಯ ಹಿಂದೆ 82°E ಎಂದು ಬರೆದಿದ್ದು, ಇದು ಏನೆಂಬುದು ಅನೇಕರ ಪ್ರಶ್ನೆಯಾಗಿದೆ.
ದೀಪಿಕಾ 82°E ಸ್ಕಿನ್ಕೇರ್ ಬ್ರ್ಯಾಂಡ್ನ ಸಹ-ಸಂಸ್ಥಾಪಕಿಯಾಗಿದ್ದು, ಈ ಬ್ರಾಂಡ್ನ ಹೆಸರನ್ನು ದೀಪಿಕಾ ತನ್ನ ಕಿವಿಯ ಹಿಂದೆ ಹಚ್ಚೆ ಹಾಕಿಸಿಕೊಂಡಿದ್ದಾರೆ.