ಬೆಂಗಳೂರು, ಮಾ 11 (DaijiworldNews/DB): ಸಾಕಷ್ಟು ವಿವಾದಗಳ ನಂತರ ನಿನ್ನೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಮದುವೆಯ ಮರುದಿನವೇ ಹನಿಮೂನ್ಗೆಂದು ದುಬೈಗೆ ಹಾರಿದ್ದಾರೆ. ದುಬೈಯಲ್ಲಿ ನವ ದಂಪತಿ ಕೈ ಕೈ ಹಿಡಿದುಕೊಂಡು ಸಾಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟ ನರೇಶ್ ಅವರು ನಿನ್ನೆ ನಾಲ್ಕನೇ ಮದುವೆಯಾದರೆ, ಪವಿತ್ರಾ ಲೋಕೇಶ್ಗೆ ಇದು ಮೂರನೇ ಮದುವೆಯಾಗಿತ್ತು. ಇವರಿಬ್ಬರೂ ಸಂಬಂಧದಲ್ಲಿರುವ ಬಗ್ಗೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕಾಗಿ ನರೇಶ್-ಪವಿತ್ರಾ ಸಂಬಂಧ ವಿವಾದಕ್ಕೆ ಸಿಲುಕಿತ್ತು. ಆದರೆ ಎಲ್ಲಾ ವಿವಾದಗಳ ನಡುವೆಯೂ ಇತ್ತೀಚೆಗಷ್ಟೇ ತಮ್ಮ ಆಪ್ತತೆಯ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಈ ಜೋಡಿ ತಾವಿಬ್ಬರೂ ಮದುವೆಯಾಗುವ ಸುದ್ದಿಯನ್ನು ಪರೋಕ್ಷವಾಗಿ ಹೇಳಿಕೊಂಡಿದ್ದರು.
ಇದೀಗ ನಿನ್ನೆ ಅಂದರೆ ಮಾರ್ಚ್ 10 ರಂದು ಇಬ್ಬರೂ ಸಪ್ತಪದಿ ತುಳಿದಿದ್ದು, ಈ ವೀಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ವಿವಾಹವಾದ ಮರುದಿನವೇ ಅಂದರೆ ಇಂದು ದಂಪತಿ ಹನಿಮೂನ್ಗೆಂದು ದುಬೈಗೆ ಹಾರಿದ್ದಾರೆ. ದುಬೈಯ ಬೀದಿ, ಮರುಭೂಮಿಗಳಲ್ಲಿ ಕೈ ಕೈ ಹಿಡಿದು ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.