ಮುಂಬೈ, ಮಾ9 ( Daijiworldnews/RS): ಧಡಕ್ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ ಸ್ಟಾರ್ ಕಿಡ್ ಜಾಹ್ನವಿ ಕಪೂರ್ ಇದೀಗ ಹಳ್ಳಿ ಹುಡುಕಿ ಲುಕ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಜಾಹ್ನವಿ ಕಪೂರ್ ಅವರು ಸದ್ಯಕ್ಕೆ 'ಬವಾಲ್, 'ಮಿಸ್ಟರ್ ಆಂಡ್ ಮಿಸಸ್ ಮಹಿ' ಸೇರಿದಂತೆ ಒಂದೆರಡು ಚಿತ್ರಗಳಲ್ಲಿ ಕಾರ್ಯನಿರತರಾಗಿದ್ದು, ಈ ಮಧ್ಯೆ ಹಳ್ಳಿ ಲುಕ್ ನಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿಸಿಕೊಂಡು ಮಿಂಚಿದ್ದಾರೆ.
ಜಾಹ್ನವಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದು ಅಭಿಮಾನಿಗಳು ಫೋಟೋವನ್ನು ಹಿರಿಯ ನಟಿ ಸ್ಮಿತಾ ಪಾಟೀಲ್ ಗೆ ಹೋಲಿಸಿ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸ್ಮಿತಾ ಪಾಟೀಲ್ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಜಾಹ್ನವಿ ಸೀರೆ ಉಟ್ಟು ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಂಡದ್ದು ಇದೇ ಮೊದಲ ಬಾರಿ ಅಲ್ಲ. ಆದರೆ, ಈ ಬಾರಿ 50 - 60 ರ ದಶಕದ ಸಿನಿಮಾ ನಟಿಯರಂತೆ ಸೀರೆ ಉಟ್ಟು , ತಲೆಗೆ ಮಲ್ಲಿಗೆ ಮುಡಿದು ಹಳ್ಳಿ ಬೆಡಗಿಯಂತೆ ಫೋಟೋ ಶೂಟ್ ಮಾಡಿಸಿದ್ದಾರೆ.
ಸದ್ಯಕ್ಕೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಜಾಹ್ನವಿ. ಆರ್ಆರ್ಆರ್ ಸಿನಿಮಾದ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಗೆ ನಾಯಕಿಯಾಗಿ ನಟಿಸಲಿದ್ದಾರೆ. ಇನ್ನೂ ಹೆಸರಿಡದ ನಟ ಜೂನಿಯರ್ ಎನ್ಟಿಆರ್ ನ 30 ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ ಬಿಡುಗಡೆ ಗೊಂಡಿದ್ದು, ನಟಿ ಜಾಹ್ನವಿ ಕಪೂರ್ ಹುಟ್ಟುಹಬ್ಬದ ದಿನವೇ ಆಕೆಗೆ ಶುಭಕೋರುವ ಪೋಸ್ಟ್ ಒಂದನ್ನು ಚಿತ್ರತಂಡದವರು ಬಿಡುಗಡೆ ಮಾಡುವ ಮೂಲಕ ಟಾಲಿವುಡ್ಗೆ ಅಧಿಕೃತವಾಗಿ ಬರಮಾಡಿಕೊಂಡಿದ್ದಾರೆ.
ಇನ್ನು ಜೂನಿಯರ್ ಎನ್ಟಿಆರ್ ಜೊತೆ ನಟಿಸುವ ಆಸೆಯನ್ನು ಇತ್ತಿಚೆಗಷ್ಟೇ ಜಾಹ್ನವಿ ಹೇಳಿಕೊಂಡಿದ್ದು, ಎನ್ಟಿಆರ್ 30 ಚಿತ್ರದ ಮೂಲಕ ಈ ಆಸೆ ಈಡೇರಿದೆ. ಇದೊಂದು ಅದ್ಭುತ ಸೆಂಟಿಮೆಂಟಲ್ ಚಿತ್ರವಾಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.