ಮುಂಬೈ, ಮಾ 04 (DaijiworldNews/DB): ನಟಿ ಆಲಿಯಾ ಭಟ್ ಅವರು ಪತಿ ರಣಬೀರ್ ಸಿಂಗ್ ಅವರನ್ನು ಬಿಟ್ಟು ನಟ ರಣ್ವೀರ್ ಸಿಂಗ್ ಅವರೊಂದಿಗೆ ಕಾಶ್ಮೀರದಲ್ಲಿ ಸುತ್ತಾಡುತ್ತಿದ್ದಾರೆ. ಅರೆ! ಇದೇನಿದು ಎಂದು ಬೆರಗಾಗಬೇಡಿ. ತಮ್ಮ ಹೊಸ ಚಿತ್ರದ ಶೂಟಿಂಗ್ಗಾಗಿ ಆಲಿಯಾ ಭಟ್ ರಣ್ವೀರ್ ಜೊತೆ ಕಾಶ್ಮೀರಕ್ಕೆ ತೆರಳಿದ್ದಾರೆ.
ಹೌದು. ಆಲಿಯಾ ರಣಬೀರ್ ಸಿಂಗ್ರನ್ನು ಮದುವೆಯಾದ ಬಳಿಕ ಮಗಳು ರಾಹಾ ಜನಿಸಿದ್ದಳು. ಆನಂತರ ಮಗಳ ಆರೈಕೆಯಲ್ಲಿ ಬ್ಯಸಿಯಾಗಿದ್ದರು. ಇದೀಗ ಹಲವು ತಿಂಗಳುಗಳ ಬ್ರೇಕ್ ನಂತರ ಬಣ್ಣ ಹಚ್ಚುತ್ತಿದ್ದಾರೆ. ರಣವೀರ್ ಸಿಂಗ್ರೊಂದಿಗೆ ತಾವು ನಟಿಸಿರುವ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಚಿತ್ರದ ಹಾಡಿನ ಶೂಟಿಂಗ್ಗಾಗಿ ಆಲಿಯಾ ಭಟ್ ಕಾಶ್ಮೀರಕ್ಕೆ ಹಾರಿದ್ದಾರೆ. ಕಾಶ್ಮೀರದ ಮಂಜಿನ ಪ್ರಕೃತಿಯಲ್ಲಿ ರಣ್ವೀರ್ ಜೊತೆ ಆಲಿಯಾ ಸುತ್ತಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಮದುವೆ, ಪ್ರೆಗ್ನೆನ್ಸಿ,. ಮಗುವಿನ ಆರೈಕೆಯಲ್ಲಿ ಆಲಿಯಾ ಬ್ಯುಸಿಯಿದ್ದ ಕಾರಣ ಈಗ ಮತ್ತೆ ಚಿತ್ರೀಕರಣ ಪ್ರಾರಂಭಗೊಂಡಿದೆ. ಕಾಶ್ಮೀರದ ಗುಲ್ಮರ್ಗ್ನಲ್ಲಿ ಕೆಂಪು ಬಣ್ಣದ ಧಿರಿಸಿನಲ್ಲಿ ಆಲಿಯಾ ಸಖತ್ ಮಿಂಚುತ್ತಿದ್ದಾರೆ.