ಮುಂಬೈ, ಫೆ 27 (DaijiwsorldNews/HR): ರಶ್ಮಿಕಾ ಮಂದಣ್ಣ ಅವರು ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಕೆಲವರು ಬ್ಯೂಟಿಫುಲ್ ಡಾಲ್ ಎಂದು ಪ್ರಶಂಸೆ ವ್ಯಕ್ತ ಪಡಿಸಿದರೆ, ಟ್ರೋಲಿಗರು ಮಾತ್ರ ಕಾಲೆಳೆದು ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ್ದಾರೆ.
ವಾಹಿನಿಯೊಂದರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದಾಗಿದ್ದರಿಂದ ಬಹುತೇಕ ನಟಿಯರು ಮಾಡೆಲ್ ಕಾಸ್ಟ್ಯೂಮ್ ಗಳಲ್ಲಿ ಬರುತ್ತಾರೆ. ಅಂತೆಯೇ ರಶ್ಮಿಕಾ ಮಂದಣ್ಣ ಕೂಡ ಬಂದಿದ್ದಾರೆ.
ಇನ್ನು ರಶ್ಮಿಕಾ ವೇದಿಕೆಯತ್ತ ಎಂಟ್ರಿ ಕೊಡುತ್ತಿದ್ದರೆ, ಎಲ್ಲ ಕ್ಯಾಮೆರಾಗಳು ಅವರತ್ತ ತಿರುಗಿ ಒಂದರ ಮೇಲೊಂದು ಫೋಟೋ ಕ್ಲಿಕ್ಕಿಸಿದ್ದು, ಇದೀಗ ಅವರ ಪೋಟೊ ಸಖತ್ ವೈರಲ್ ಆಗುತ್ತಿದೆ.