ಮುಂಬಯಿ, ಫೆ 25 (DaijiworldNews/DB): ಉದ್ಯಮಿ ಆದಿಲ್ ದುರಾನಿಯನ್ನು ಮದುವೆಯಾದ ಬಳಿಕ ಸದಾ ಸುದ್ದಿಯಲ್ಲಿರುವ ನಟಿ ರಾಖಿ ಸಾವಂತ್ ಇದೀಗ ಮದುಮಗಳ ಉಡುಗೆ ಹಾಕಿಕೊಂಡು ಪತಿಯ ಕಾಲೆಳೆದಿದ್ದಾರೆ. ಅಳು ಮರೆತು ಖುಷಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಆದಿಲ್ ದುರಾನಿ ಮತ್ತು ರಾಖಿ ಸಾವಂತ್ ಗುಟ್ಟಾಗಿ ಕೆಲ ತಿಂಗಳುಗಳ ಹಿಂದೆಯೇ ಮದುವೆಯಾಗಿದ್ದರೂ, ಅವರಿಬ್ಬರ ಮದುವೆ ವಿಚಾರ ಇತ್ತೀಚೆಗಷ್ಟೇ ಬಹಿರಂಗಗೊಂಡಿತ್ತು. ಆದಿಲ್ಗೆ ಅಕ್ರಮ ಸಂಬಂಧವಿದ್ದು, ತನಗೆ ವಂಚಿಸಿದ್ದಾನೆಂದು ಆರೋಪಿಸಿದ್ದ ರಾಖಿ ಸಾವಂತ್ ಪತಿ ವಿರುದ್ದವೇ ದೂರು ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಿದ್ದರು. ಅಲ್ಲದೆ ಆತನಿಗೆ ವಿಚ್ಚೇದನ ನೀಡುವುದಾಗಿಯೂ ಹೇಳಿಕೊಂಡಿದ್ದರು. ಸದ್ಯ ಆದಿಲ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇನ್ನು ಈ ವಿವಾದಗಳ ನಡುವೆಯೇ ರಾಖಿ ಸಾವಂತ್ ಶೂಟಿಂಗ್ನಲ್ಲಿಯೂ ಭಾಗಿಯಾಗಿದ್ದಾರೆ. ಶೂಟಿಂಗ್ಗಾಗಿ ಮದುಮಗಳ ಉಡುಗೆ ಧರಿಸಿರುವ ರಾಖಿ ಅದೇ ಉಡುಗೆಯಲ್ಲಿ ಫೋಟೋ ಶೇರ್ ಮಾಡಿಕೊಂಡು ಪತಿ ಆದಿಲ್ ಕಾಲೆಳೆದಿದ್ದಾರೆ. ಒಮ್ಮೆ ಮದುವೆಯಾಗಿದ್ದು, ಇನ್ನೊಮ್ಮ ಮದುವೆಯ ಉಡುಗೆ ತೊಡಲಾರೆ. ಮುಂದೇನಿದ್ದರೂ ಖಬರ್ಗೆ ಹೋಗುವುದು. ಒಬ್ಬನೇ ಗಂಡ ಜೈಲಿನಲ್ಲಿದ್ದಾರೆ. ಮುಂದೆ ನಾನೆಂದೂ ಅಳಲಾರೆ. ಸದಾ ಖುಷಿಯಾಗಿರಲು ಪ್ರಯತ್ನಿಸುತ್ತೇನೆ ಎಂದು ರಾಖಿ ಹೇಳಿಕೊಂಡಿದ್ದಾರೆ.