ಮುಂಬೈ, ಫೆ 23 (DaijiworldNews/HR): ಸದಾ ಸುದ್ದಿಯಲ್ಲಿರು ನಟಿ ರಾಖಿ ಸಾವಂತ್ ಕಳೆದ ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದು, ಇದೀಗ ರಾಖಿ ಬದುಕಲ್ಲಿ ಬಿರುಕು ಮೂಡಿದೆ.
ರಾಖಿ ಸಾವಂತ್ ತನ್ನ ಗಂಡನ ವಿರುದ್ಧವೇ ದೂರು ನೀಡಿದ್ದು, ಆದಿಲ್ನನ್ನು ಪೊಲೀಸರು ಬಂಧಿಸಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಪೊಲೀಸ್ ಠಾಣೆಯ ಬಳಿ ರಾಖಿ ಸಾವಂತ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ರಾಕಿ ಸಾವಂತ್ ಗಂಡನ ವಿರುದ್ಧ ಅಕ್ರಮ ಸಂಬಂಧ, ವರದಕ್ಷಿಣೆ ಆರೋಪ ಸೇರಿದಂತೆ ಅನೇಕ ಆರೋಪಗಳನ್ನು ಮಾಡಿದ್ದು, ವಿವಾಹೇತರ ಸಂಬಂಧ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹಲವು ರೀತಿಯ ಆರೋಪಗಳನ್ನು ರಾಖಿ ಸಾವಂತ್ ಹೊರಿಸಿದ್ದಾರೆ.
ಇನ್ನು ಈ ಎಲ್ಲಾ ಘಟನೆಗಳನ್ನು ವಿವರಿಸುತ್ತಿರುವಾಗ ರಾಕಿ ಸವಾಂತ್ ಕುಸಿದು ಬಿದ್ದಿದ್ದಾರೆ. ಆ ವಿಡಿಯೋ ವೈರಲ್ ಆಗಿದ್ದು, ಇದೀಗ ರಾಕಿ ಬೆಂಬಲಕ್ಕೆ ಆತನ ಮಾಜಿ ಗಂಡ ರಿತೇಷ್ ಬಂದಿದ್ದಾರೆ.