ಹೈದರಾಬಾದ್, ಫೆ 20 (DaijiworldNews/HR): ನಟಿ ಸಮಂತಾ ರುತ್ ಪ್ರಭು ಅವರಿಗೆ ಸಿನಿಮಾದಲ್ಲಿ ಬ್ಯುಸಿ ಇರುವ ಆರೋಗ್ಯ ಕೈ ಕೊಟ್ಟಿದ್ದು, ಇದರಿಂದ ಚಿಕಿತ್ಸೆಗಾಗಿ ತುಂಬ ದಿನಗಳ ಕಾಲ ಬ್ರೇಕ್ ಪಡೆದುಕೊಂಡಿದ್ದ ಅವರು ಇದೀಗ ಮತ್ತೆ ಎದ್ದು ನಿಂತು ಸಿನಿಮಾಗಳ ಮುಖ ಮಾಡಲಿದ್ದಾರೆ.
ನಟಿ ಸಮಂತಾ ಈಗ ಜಿಮ್ನಲ್ಲಿ ಭರ್ಜರಿ ಕಸರತ್ತು ನಡೆಸುತ್ತಿದ್ದು, ಸಮಂತಾ ವರ್ಕೌಟ್ ಮಾಡುತ್ತಿರುವ ಹೊಸ ವಿಡಿಯೋ ವೈರಲ್ ಆಗಿದ್ದು, ವರ್ಕೌಟ್ ವಿಡಿಯೋ ನೋಡಿ ಇಷ್ಟು ಬೇಗ ಚೇತರಿಸಿಕೊಂಡಿದ್ದೀರಾ ಎಂದು ಅಭಿಮಾನಿಗಳಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇನ್ನು Myositis ಎಂಬ ಕಾಯಿಲೆಯಿಂದ ಚೇತರಿಸಿಕೊಂಡಿರುವ ಸಮಂತಾ ಅವರು ಈಗ ಫಿಟ್ನೆಸ್ ಕಡೆಗೆ ಗಮನ ಹರಿಸುತ್ತಿದ್ದು, ಹೆಚ್ಚು ಸಮಯವನ್ನು ಜಿಮ್ನಲ್ಲಿ ಕಳೆಯುತ್ತಿದ್ದಾರೆ.