ಮುಂಬೈ, ಮಾ 15(SM): ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ‘ಪಿಎಂ ನರೇಂದ್ರ ಮೋದಿ’ ಚಲನಚಿತ್ರ ಮುಂದಿನ ತಿಂಗಳು ದೇಶದಾದ್ಯಂತೆ ತೆರೆಗೆ ಬರಲಿದೆ. ವಿವೇಕ್ ಒಬೇರಾಯ್ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ಏಪ್ರಿಲ್ ಹನ್ನೆರಡರಂದು ಬಿಡುಗಡೆಗೊಳ್ಳಲಿದೆ.
ಮೇರಿ ಕೋಮ್ ಹಾಗೂ ಸರಬ್ಜಿತ್ ಸಿನಿಮಾಗಳನ್ನು ಮಾಡಿದ್ದ ಒಮಂಗ್ ಕುಮಾರ್ ಮೋದಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಳೆದ ಜನವರಿಯಲ್ಲಿ ಗುಜರಾತ್ ನಲ್ಲಿ ಈ ಚಿತ್ರದ ಶೂಟಿಂಗ್ ಆರಂಭಗೊಂಡಿದ್ದು, ವಾಣಿಜ್ಯ ನಗರಿ ಮುಂಬೈಯಲ್ಲಿ ಕಂಪ್ಲಿಟ್ ಗೊಳ್ಳಲಿದೆ.
ಇನ್ನು ಉತ್ತರಾಖಂಡ್ ನಲ್ಲಿ ಕೂಡ ಸಿನಿಮಾದ ಚಿತ್ರೀಕರಣ ನಡೆದಿದೆ. ಮೋದಿ ಅವರ ಆರಂಭದ ದಿನಗಳು, ರಾಜಕೀಯ ಪಯಣವನ್ನು ಉತ್ತರ ಕಾಶಿ ಜಿಲ್ಲೆಯ ಗಂಗಾ ಘಾಟ್, ಕಲ್ಪ್ ಕೇದಾರ್ ಮಂದಿರ್ ಮತ್ತಿತರ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.
ಪ್ರಧಾನಿ ಹುದ್ದೆಗೆ ಏರುವ ತನಕದ ಪಯಣವನ್ನು ಸಿನಿಮಾದಲ್ಲಿ ಹೇಳಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.