ಮುಂಬೈ, ಫೆ 16 (DaijiworldNews/HR): ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಮಗಳು ರಹಾ ಮುಖವನ್ನು ತೋರಿಸಿಲ್ಲ. ಆದರೆ ಆಲಿಯಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಪೋಟೊಗಳನ್ನು ಶೇರ್ ಮಾಡಿಕೊಂಡಿದ್ದು, ಈ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನ ಮೂಡಿದೆ.
ಆಲಿಯಾ ಭಟ್ ಅವರು ಇನ್ಸ್ಟಾಗ್ರಾಮ್ನಲ್ಲಿ ಬೇಬಿ ಬಟ್ಟೆಗಳ ಫೋಟೋ ಅಪ್ಲೋಡ್ ಮಾಡಿದ್ದು, ಈ ಫೋಟೋಗಳಲ್ಲಿ ಇರೋದು ಮಗಳು ರಹಾ ಎಂದು ಅಭಿಮಾನಿಗಳು ಊಹೆ ಮಾಡುತ್ತಿದ್ದಾರೆ. ಆದರೆ 3 ತಿಂಗಳ ಎಳೆಯ ರಹಾ ಹೀಗೆ ಕೂತುಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆಕೂಡ ಹುಟ್ಟಿಕೊಂಡಿದೆ.
ಕಳೆದ ನವೆಂಬರ್ನಲ್ಲಿ ಆಲಿಯಾ ಭಟ್ ಅವರು ಮಗಳು ರಹಾಗೆ ಜನ್ಮ ನೀಡಿದ್ದು, ಇದುವರೆಗೂ ರಣಬೀರ್ ಕಪೂರ್, ಆಲಿಯಾ ಭಟ್ ಕುಟುಂಬದವರು ರಹಾ ಮುಖವನ್ನು ಸಾರ್ವಜನಿಕವಾಗಿ ಎಲ್ಲಿಯೂ ತೋರಿಸಿಲ್ಲ.